ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

kollegala mla mahesh
Published on

ಬೆಂಗಳೂರು: ಬಿಎಸ್ಪಿಯಿಂದ ಉಚ್ಛಾಟಿತಗೊಂಡ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಇಂದು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್​ವೈ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ ಯಡಿಯೂರಪ್ಪ ಹೇಳಿದ ಆ ಒಂದು ಮಾತು ಕೂತೂಹಲ ಮೂಡಿಸಿದೆ.

ನಾಡಿನ ಉದ್ದಗಲಕ್ಕೂ ಪರಿಶಿಷ್ಟರು ಇದ್ದಾರೆ. ಮಹೇಶ್ ಸೇರ್ಪಡೆಯಿಂದ ಎಲ್ಲರೂ ಬಿಜೆಪಿಯತ್ತ ವಾಲುತ್ತಾರೆ. ಪರಿಶಿಷ್ಟರನ್ನ ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು. ದಲಿತರ ಪರವಾಗಿಯೂ ನಮ್ಮ ಪಕ್ಷ ಇದೆ ಎಂಬ ಸಂದೇಶ ಹೋಗಬೇಕು ಎಂದ ಯಡಿಯೂರಪ್ಪ, ದಲಿತ ನಾಯಕ ಬಿಜೆಪಿಗೆ ಸೇರಿದ್ದಾನೆಂಬುದು ಸಿಎಂ ಬೊಮ್ಮಾಯಿಗೆ ಗೊತ್ತಿದೆ. ಅವರು ಇದನ್ನು ಗಮನದಲ್ಲಿ ಇಟ್ಟುಕೊಳ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಹೇಶ್​ಗೆ ಸಚಿವ ಸ್ಥಾನ ಕೊಡುವ ಅಥವಾ ಆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡುವ ಬಗ್ಗೆ ಸುಳಿವು ಕೊಟ್ಟರು. ಇದನ್ನೂ ಓದಿರಿ ಬಿಜೆಪಿಗೆ ಸೇರಲು ಅಸಲಿ ಕಾರಣ ಬಿಚ್ಚಿಟ್ಟ ಕೊಳ್ಳೇಗಾಲ ಶಾಸಕ ಎನ್. ಮಹೇಶ್​..!​​

ಮಹೇಶ್ ಸೇರ್ಪಡೆಯಿಂದ ಬಿಜೆಪಿಗೆ ಆ ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ ಎಂದು ಬಿಎಸ್​ವೈ ಹೇಳಿದರು.

ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಹೇಶ್ ನಮ್ಮ‌ ಆತ್ಮೀಯ‌ ಸ್ನೇಹಿತರು. ಚಳವಳಿ ಮೂಲಕ ಬಂದವರು. ಅವರ ಸಂಘಟನಾ ಶಕ್ತಿ ಅಗಾಧ. ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು. ಕೊಳ್ಳೇಗಾಲದ ಎಲ್ಲ ಜನಾಂಗ ಅವರನ್ನು ಆಯ್ಕೆ ಮಾಡಿದೆ. ನಮ್ಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಬಿಜೆಪಿಗೆ ಅವರು ಬಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಸಹಕಾರ ಕೊಟ್ಟಿದ್ದರು. ಇವರ ಸೇವೆಯನ್ನು ಪಕ್ಷ ಬಳಸಿಕೊಳ್ಳಲಿದೆ. ಆ ಭಾಗದಲ್ಲಿ ವಿಜಯೇಂದ್ರ ಸುತ್ತಾಡಿದ್ದಾರೆ. ವಿಜಯೇಂದ್ರರ ಶ್ರಮಕ್ಕೆ ಮಹೇಶ್ ಶಕ್ತಿ ಸೇರಿದರೆ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net