ಬಿಜೆಪಿಗೆ ಸೇರಲು ಅಸಲಿ ಕಾರಣ ಬಿಚ್ಚಿಟ್ಟ ಕೊಳ್ಳೇಗಾಲ ಶಾಸಕ ಎನ್. ಮಹೇಶ್​..!​​

N Mahesh
Published on

ಬೆಂಗಳೂರು: ನಾನು ಬಿಜೆಪಿಗೆ ಸೇರಲು ಅಭಿವೃದ್ಧಿಯೇ ಕಾರಣ. ದೇಶದ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಕೊಳ್ಳೇಗಾಲ ಶಾಸಕ ಎನ್​. ಮಹೇಶ್​ ಹೇಳಿದರು.

ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಬಿಜೆಪಿ ಸೇರಿದ ಬಳಿಕ ಶಾಸಕ‌ ಎನ್.ಮಹೇಶ್ ಮಾತನಾಡಿದರು. ನಾನು ಬಿಜೆಪಿಯನ್ನು ಸೇರುತ್ತಿದ್ದೇನೆ. ಅದಕ್ಕೆ ಕಾರಣ ಅಭಿವೃದ್ಧಿ. ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಅಂಬೇಡ್ಕರ್ ಎಂದು ಹೇಳಿದರು.

ಏಳು ಬೀಳುಗಳನ್ನು ಕಂಡು ರಾಷ್ಟ್ರ ಇಂದು ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಅಭಿವೃದ್ಧಿಯತ್ತ ಬಿಜೆಪಿ ಕೊಂಡೊಯ್ಯುತ್ತಿದೆ. ನನಗೆ ಆತ್ಮಸ್ಥೈರ್ಯ ತುಂಬಿದವರು ಮಾಜಿ ಸಿಎಂ ಯಡಿಯೂರಪ್ಪ. ಬೊಮ್ಮಾಯಿ ಅವರು 12 ವರ್ಷಗಳ ಪರಿಚಯದವರು. ರಾಷ್ಟ್ರಾಧ್ಯಕ್ಷ ನಳಿನ್​ ಕುಮಾರ್​ ಕಟೀಲರನ್ನ ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಅವರಿಂದ ಈ ಕಾರ್ಯಕ್ರಮದಲ್ಲಿದ್ದಾರೆ ಎಂದು ತಿಳಿಸಿದರು.

ಮೈಸೂರಲ್ಲಿ ವಿಜಯಣ್ಣ ಪಕ್ಷ ಸಂಘಟಿಸ್ತಿದ್ದಾರೆ. ಅವರು ನನಗೆ ಮತ್ತೊಂದು ಶಕ್ತಿ. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗ್ತಿದ್ದೇನೆ ಎಂದು ಬಿಜೆಪಿ ಸೇರ್ಪಡೆಯಾದ ಮಹೇಶ್ ಹೇಳಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net