More

    ಕಂಕಣ ಭಾಗ್ಯಕ್ಕೆ ಕರೊನಾ ಬ್ರೇಕ್! 27 ಜೋಡಿಗಳ ವಿವಾಹ ಮುಂದೂಡಿಕೆ

    ಬೆಂಗಳೂರು ಗ್ರಾಮಾಂತರ : ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಬೇಕಿದ್ದ 27 ಜೋಡಿಗಳ ಕಂಕಣ ಭಾಗ್ಯಕ್ಕೆ ಕರೊನಾ ಬ್ರೇಕ್ ಹಾಕಿದೆ. ಕರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಗಸ್ಟ್ 13 ಮತ್ತು ಸೆಪ್ಟೆಂಬರ್ 13 ರಂದು ನಿಗದಿಯಾಗಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮುಂದೂಡಿದೆ.

    ಬಡ ಕುಟುಂಬಗಳ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಘಾಟಿ ಸುಬ್ರಹ್ಮಣ್ಯದಲ್ಲಿ ಇದೇ ತಿಂಗಳ 13 ಮತ್ತು ಸೆ.13 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಇದಕ್ಕೆ 66 ಅರ್ಜಿ ಸಲ್ಲಿಕೆಯಾಗಿತ್ತು. ಈ ಪೈಕಿ 27 ಜೋಡಿ ಅರ್ಜಿ ಮಾತ್ರ ವಿವಾಹಕ್ಕೆ ಅರ್ಹವಾಗಿದ್ದು, ಆ.6 ರಂದು ಜೋಡಿಗಳ ಪಟ್ಟಿ ಬಿಡುಗಡೆಯಾಗಬೇಕಿತ್ತು.

    ಇದನ್ನೂ ಓದಿ: ಬೆಳ್ಮಣ್ ಕ್ರಿಕೆಟ್‌ ಆಡುತ್ತಿದ್ದಾಗ ಕುಸಿದುಬಿದ್ದು ಯುವಕ‌ ಸಾವು

    ಆದರೆ ಕರೊನಾ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ವಿಜಯ ಇ. ರವಿಕುಮಾರ್, ವಿವಾಹ ಕಾರ್ಯಕ್ರಮವನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ.

    ಕರೊನಾ ಮೊದಲ ಹಾಗೂ ಎರಡನೇ ಅಲೆಯೂ ನೂರಾರು ಜೋಡಿಗಳ ವಿವಾಹಕ್ಕೆ ಕೊಕ್ಕೆ ಹಾಕಿತ್ತು. ಈ ವೇಳೆ ನೋಂದಾಯಿಸಿಕೊಂಡಿದ್ದ ಬಹುತೇಕ ಜೋಡಿಗಳು ಮನೆಗಳ ಬಳಿಯೇ ಸರಳವಾಗಿ ಮದುವೆ ಶಾಸ್ತ್ರ ಮುಗಿಸಿಕೊಂಡಿದ್ದವು. ಈ ಬಾರಿಯ ಕಾರ್ಯಕ್ರಮ ಮುಂದೂಡಿ ಆದೇಶ ಹೊರಬಿದ್ದಿರುವುದರಿಂದ ಗೊಂದಲಕ್ಕೊಳಗಾದ ವಧುವರರ ಪಾಲಕರು ತರಾತುರಿಯಲ್ಲಿ ಮದುವೆ ಮಾಡಿ ಮುಗಿಸುವ ಧಾವಂತಕ್ಕೆ ಬಿದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ

    VIDEO | ಸಂಸತ್ತಿನ ಹೊರಗಡೆ ವಿಪಕ್ಷ ನಾಯಕರ ವಾಕ್​​ಸಮರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts