

ಬೀದರ್: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಅಖಾಡ ರಂಗೇರಿದ್ದು, ಮತದಾರರ ಓಲೈಕೆಯ ಕಸರತ್ತು ಜೋರಾಗಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತಗಳಿಗೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಕಾಂಗ್ರೆಸ್ ನಾಯಕರು ಡೀಲ್ ಕುದುರಿಸಿರುವ ವಿಡಿಯೋ ಬಯಲಾಗಿದೆ.
20 ಸಾವಿರ ರೂಪಾಯಿ ಅಡ್ವಾನ್ಸ್ ಟೋಕನ್ ಅಮೌಂಟ್ ನೀಡುತ್ತಿದ್ದೇವೆ, ಉಳಿದ ಹಣವನ್ನು ಬಿಜೆಪಿಯವರೆಷ್ಟು ಕೊಡುತ್ತಾರೆ ಎಂಬುದನ್ನು ನೋಡಿಕೊಂಡು ಕೊಡುತ್ತೇವೆ ಎಂದು ಬೀದರ್ನಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಿರುವ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಬಸವಕಲ್ಯಾಣ ಕಾಂಗ್ರೆಸ್ ನಾಯರಾದ ಆನಂದ ದೇವಪ್ಪ, ಶಿವರಾಜ್ ನರಶೆಟ್ಟಿ ಸೇರಿದಂತೆ ಹಲವು ಮುಖಂಡರು ಇದ್ದಾರೆ.