ಮುಳುಗೋ ಸೂರ್ಯನ ಮಧ್ಯದಿಂದ ಹಾರಿಹೋದ ವಿಮಾನ; ಗಮನ ಸೆಳೆಯಿತು ಮನಮೋಹಕ ದೃಶ್ಯ

Sun Set
Published on

ಬೆಂಗಳೂರು: ಮೊನ್ನೆಮೊನ್ನೆ ಹೊಸ ವರ್ಷದ ಅಂದರೆ ಜನವರಿ 1ರಂದು ಬಹಳಷ್ಟು ಮಂದಿ ಸೂರ್ಯೋದಯವನ್ನು ವಿಶೇಷ ಆಸಕ್ತಿ ಹಾಗೂ ಸಂಭ್ರಮದಿಂದ ಕಣ್ತುಂಬಿಕೊಂಡು ಸಂತೋಷಪಟ್ಟಿದ್ದರು. ಅದಾಗಿ ನಾಲ್ಕೇ ದಿನಗಳಲ್ಲಿ ಇನ್ನೊಂದು ಸೂರ್ಯಾಸ್ತದ ದೃಶ್ಯ ಜನರ ಗಮನ ಸೆಳೆದಿರುವುದಷ್ಟೇ ಅಲ್ಲ, ಮನಮೋಹಕ ಎನಿಸಿ ವೈರಲ್ ಕೂಡ ಆಗಿದೆ. ಇದಕ್ಕೆ ಕಾರಣ ಅದೊಂದು ಲೋಹದಹಕ್ಕಿ!

ಅಂದರೆ, ಮುಳುಗುತ್ತಿದ್ದ ಸೂರ್ಯನ ಮಧ್ಯದಿಂದ ವಿಮಾನವೊಂದು ಹಾದುಹೋಗಿದ್ದು ಅದು ವಿಶೇಷವಾದ ದೃಶ್ಯವಾಗಿ ಪರಿಣಮಿಸಿದೆ. ಇಂಥ ಮನಮೋಹಕ ದೃಶ್ಯಾವಳಿ ಮೂಡಿಬಂದಿದ್ದು ರಾಜಧಾನಿ ಬೆಂಗಳೂರಿನಲ್ಲೇ ಎಂಬುದು ಇನ್ನೊಂದು ವಿಶೇಷ.

ಛಾಯಾಗ್ರಾಹಕ ಆದಿತ್ಯ ವೆಂಕಟೇಶ್ ಎನ್ನುವವರು ಈ ಮನಮೋಹಕ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 'ಇಂದು ಬೆಂಗಳೂರಿನಲ್ಲಿ ಕಾಣಸಿಕ್ಕ ಸುಂದರ ಸೂರ್ಯಾಸ್ತ' ಎಂದು ಅವರು ನಿನ್ನೆಯ ಈ ದೃಶ್ಯದ ವಿಡಿಯೋ ಮಾಡಿ ಅವರು ಟ್ವೀಟ್ ಮಾಡಿದ್ದಾರೆ. ಅಂದು ಒಂದೇ ದಿನದಲ್ಲಿ ವೈರಲ್ ಆಗಿದ್ದಷ್ಟೇ ಅಲ್ಲ, 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸಾವಿರಕ್ಕೂ ಅಧಿಕ ಮಂದಿ ಅದನ್ನು ರಿಟ್ವೀಟ್ ಮಾಡಿಕೊಂಡಿದ್ದು, 13 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net