ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

Marriage
Published on

ಬೆಂಗಳೂರು: ಜಗತ್ತಿನಲ್ಲಿ ನಾನಾ ರೀತಿಯ ಕೋರ್ಸ್​ಗಳು, ತರಬೇತಿಗಳೂ ಇವೆ. ಆದರೆ ಇದು ಅವೆಲ್ಲಕ್ಕಿಂತಲೂ ವಿಭಿನ್ನ ಎಂದರೂ ಅತಿಶಯೋಕ್ತಿ ಏನಲ್ಲ. ಇಲ್ಲಿ ಸಂಸಾರ ನಿಭಾಯಿಸಲಿಕ್ಕೂ ತರಬೇತಿ ನೀಡುತ್ತಾರೆ. ಮದುವೆ ಆಗಲಿರುವವರು, ಮದುವೆ ಆದವರು ಇವರಿಗೆ ಸಂಸ್ಥೆಯೊಂದು ಇಂಥ ಕೋರ್ಸ್​ ಆರಂಭಿಸಿದೆ.

ದುಲ್ಹ-ದುಲ್ಹನ್ ಕೋರ್ಸ್ ಎಂದೇ ಸಂಸ್ಥೆಯೊಂದು ಇಂಥ ಕೋರ್ಸ್ ಆರಂಭಿಸಿದೆ. ಮಾತ್ರವಲ್ಲ, ಈ ಕೋರ್ಸ್​ ಮೂಲಕ ವಧು-ವರರಿಗೆ, ಗಂಡ-ಹೆಂಡತಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತದೆ ಎಂಬ ವಿವರಗಳನ್ನೂ ಇದು ನೀಡಿದೆ. ಅಂದಹಾಗೆ ಈ ವಿನೂತನ ರೀತಿಯ ಕೋರ್ಸ್ ಆರಂಭಿಸಿರುವುದು ಹೈದರಾಬಾದ್​ನ ಫ್ಯಾಮಿಲಿ ಇನ್​ಸ್ಟಿಟ್ಯೂಟ್ ಎಂಬ ಸಂಸ್ಥೆ.

ಮದುವೆ ಎಂದರೇನು?, ಅಂಡರ್​ಸ್ಟ್ಯಾಂಡಿಂಗ್ ಮಂತ್ರ, ಯಾಕೆ ಮದುವೆ?, ಕೋಪ ನಿರ್ವಹಣೆ, ನಿಯಮ ಮತ್ತು ಹೊಣೆಗಾರಿಕೆ, ಪತಿಯ ಪ್ರಮಾದಗಳು, ಪತ್ನಿಯ ಮೂಲಭೂತ ಅಗತ್ಯಗಳು, ಪತಿ ಮಾಡಬೇಕಾದ್ದು ಮತ್ತು ಮಾಡಬಾರದ್ದು, ಆದರ್ಶ ಪತಿಯಾಗುವುದು ಹೇಗೆ?, ಹ್ಯಾಪಿನೆಸ್​ ಮಂತ್ರ, ಮೂರ್ಖ ನಿರೀಕ್ಷೆಗಳು, ಆದರ್ಶ ಪತ್ನಿಯಾಗುವುದು ಹೇಗೆ?, ಪತಿಯನ್ನು ಗೆಲ್ಲುವುದು ಹೇಗೆ?, ಮನೆ ನಿರ್ವಹಣೆ, ನಿರ್ಧಾರಗಳ ಪರಿಣಾಮ ಎಂಬ ವಿಷಯಗಳಡಿ ಈ ಕೋರ್ಸ್ ನೀಡಲಾಗುತ್ತಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net