2022-23ನೇ ಸಾಲಿನ ಆರ್​ಟಿಇ ಸೀಟಿಗೆ ಅರ್ಜಿ ಆಹ್ವಾನ

RTE vvani
Published on

ಬೆಂಗಳೂರು: ಶಿಕ್ಷಣ ಇಲಾಖೆಯು 2022-23ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ)ಯಲ್ಲಿ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ. ಪಾಲಕರು ಮಾ.3ರವರೆಗೆ ಅರ್ಜಿ ಸಲ್ಲಿಸಬಹುದು.

ಶಿಕ್ಷಣ ಇಲಾಖೆಯು ನೆರೆ-ಹೊರೆ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಲಕರು ವೆಬ್​ಸೈಟ್​ನಲ್ಲಿ ನೋಡಿ ತಮ್ಮ ವಾರ್ಡ್​ ವ್ಯಾಪ್ತಿಯಲ್ಲಿರುವ ಶಾಲೆಗಳ ಪಟ್ಟಿಯನ್ನು ವೀಕ್ಷಿಸಬಹುದು. ಕಳೆದ ಮೂರ್ನಾಲ್ಕು ವರ್ಷದಿಂದ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆ ಎಲ್ಲಿ ಇಲ್ಲವೋ ಅಥವಾ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳಲ್ಲಿ ಆರ್​ಟಿಇ ಸೀಟು ನೀಡುತ್ತಿದೆ. ಇದರಿಂದ ಅರ್ಜಿ ಸಲ್ಲಿಸುವ ವೇಳೆ ತಮ್ಮ ವ್ಯಾಪ್ತಿ ಪ್ರದೇಶದಲ್ಲಿರುವ ಆರ್​ಟಿಇಗೆ ಒಳಪಡುವ ಖಾಸಗಿ ಶಾಲೆಗಳನ್ನು ಪರಿಶೀಲಿಸಿ ಆನಂತರ ಆದ್ಯತೆ ಮೇರೆಗೆ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ www.schooleducation.kar.nic.in ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net