More

    ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ?

    ಮಂಡ್ಯ: ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್​ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್… ಎಂದು ಘೋಷಣೆ ಕೂಗಿದ್ದ ಹಿಜಾಬ್​ಧಾರಿ ವಿದ್ಯಾರ್ಥಿನಿಯೊಬ್ಬಳಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎನ್ನಲಾದ ಪೋಸ್ಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

    ‘ಸಂಘ ಪರಿವಾರದ ಗೂಂಡಾಗಳ ಮದ್ಯೆ ಮಂಡ್ಯ ಕನ್ನಡತಿ ಮುಸ್ಕಾನ್ ಧೈರ್ಯ ತೋರಿದ್ದಾಳೆ. ಸಹೋದರಿಗೆ ಜಮಾತ್ ಹೇ ಹಿಂದ್ ಪ್ರಮುಖ ಮೌಲಾನ ಮಹಾಮೂದ್ ಮದನಿ ಅವರು 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಹಣವು ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿ. ಅದೇ ರೀತಿ ಈ ಹಣವು ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ, ಡಾಕ್ಟರ್, ವಕೀಲೆ ಅಥವಾ ಇನ್ನಿತರ ಉದ್ದೆ ಅಲಂಕರಿಸಲಿ’ ಎಂಬ ಬರಹವುಳ್ಳ ಪೋಸ್ಟ್ ಅನ್ನು ಇರ್ಜಾನ್ ಅದ್ದೂರ್ ಎಂಬಾತ ತನ್ನ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ. ಮೌಲಾನ ಮಹಾಮೂದ್ ಮದನಿ ಅವರ ಫೇಸ್​ಬುಕ್​ನಲ್ಲೂ ಈ ಬಗ್ಗೆ ಮಾಹಿತಿ ಇದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

    'ಅಲ್ಲಾಹು ಅಕ್ಬರ್' ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ?

    'ಅಲ್ಲಾಹು ಅಕ್ಬರ್' ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ?

    ನಿನ್ನೆ ಏನಾಗಿತ್ತು?: ನಿನ್ನೆ(ಮಂಗಳವಾರ) ಮಂಡ್ಯದ ಪಿಇಎಸ್​ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಇದಕ್ಕೆ ಪ್ರತಿಯಾಗಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈಶ್ರೀರಾಮ್​ ಘೋಷಣೆ ಕೂಗಿದ್ದಾರೆ. ಈ ವೇಳೆ ಹಿಜಾಬ್​ಧಾರಿ ವಿದ್ಯಾರ್ಥಿನಿಯೊಬ್ಬಳು ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್… ಎಂದು ಘೋಷಣೆ ಕೂಗಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯನ್ನು ಒಳಗೆ ಕಳುಹಿಸಿದ್ದರು. ಎಲ್ಲಿಯವರೆಗೆ ಹಿಜಾಬ್ ತೆಗೆಯಲ್ಲ ಅಲ್ಲಿಯವರೆಗೆ ನಾವು ಕೇಸರಿ ಶಾಲು ತೆಗೆಯಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಒಂದು ನ್ಯಾಯ ಏಕೆ? ಇಲ್ಲಿ ಎಲ್ಲರೂ ಸಮಾನರು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದರು.

    ಭುಗಿಲೆದ್ದ ಹಿಜಾಬ್​ ವಿವಾದ: ಬನಹಟ್ಟಿಯಲ್ಲಿ ಕಲ್ಲು ತೂರಾಟ, ಕಾಲೇಜಿಗೆ ರಜೆ ಘೋಷಣೆ, ಪೊಲೀಸರಿಂದ ಲಾಠಿ ಚಾರ್ಜ್

    ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

    ya hijab

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts