More

    ಶುದ್ಧ ನೀರು ಸೇವನೆ ಅಗತ್ಯ

    ಕಿಕ್ಕೇರಿ: ಅಶುದ್ಧ ನೀರಿನಿಂದ ರೋಗಗಳು ಹೆಚ್ಚಾಗುತ್ತಿದ್ದು, ಶುದ್ಧ ನೀರು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಸಲಹೆ ನೀಡಿದರು.

    ಹೋಬಳಿಯ ಮಾಣಿಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಅಭಿವೃದ್ಧಿ ಯೋಜನೆಯಡಿ ಕಾರ್ಖಾನೆ ವತಿಯಿಂದ ಸುಮಾರು 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಘಟಕ ಆರಂಭಿಸಲಾ ಗಿದೆ. ಆರೋಗ್ಯ ಕಾಳಜಿಗಾಗಿ ಕಾರ್ಖಾನೆ ಸಾಮಾಜಿಕ ಸೇವೆ ಮಾಡುತ್ತಿದೆ ಎಂದರು.

    ರೈತ, ಜನ, ಪರಿಸರಸ್ನೇಹಿಯಾಗಿ ಕಾರ್ಖಾನೆ ಸೇವೆ ಮಾಡಲು ಬದ್ಧವಿದೆ. ಸಕಲ ಜೀವಗಳಿಗೆ ನೀರು ಜೀವಾಮೃತವಾಗಿದ್ದು ಮಿತವಾಗಿ ಬಳಸಬೇಕಿದೆ. ಗ್ರಾಮೀಣ ಜನರ ಸಮಸ್ಯೆ ಅರಿತು ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮಕ್ಕೆ ನೀಡಲಾಗಿದೆ ಎಂದರು.

    ನೀರಿಗಾಗಿ ದೊಡ್ಡ ಯುದ್ಧ ನಡೆಯುವ ಸಂದಿಗ್ಧತೆ ನಿರ್ಮಾಣವಾಗುವ ಮುನ್ನ ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ. ಆ ಮೂಲಕ ಅಂರ್ತಜಲ ವೃದ್ಧಿಗೆ ಜನತೆ ಸಹಕರಿಸಬೇಕಿದೆ ಎಂದರು.

    ಕಬ್ಬು ಅರೆಯುವಿಕೆ ವಿಭಾಗದ ಹಿರಿಯ ವ್ಯವಸ್ಥಾಪಕ ಕೆ. ಬಾಬುರಾಜ್, ಆರ್.ಇ.ಕುಮಾರ್, ಮೇಯನ್, ನವೀನ್, ಅಶೋಕ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts