ಗ್ಯಾಂಗ್ ರೇಪ್​ ಮಾಡ್ತಾರೆ ಅಂದ್ರೆ ಹೆಣ್ಣಿಗೆ ರಕ್ಷಣೆ ಎಲ್ಲಿದೆ? ಗಂಡು ಮಕ್ಕಳೇ ನಮ್ಮನ್ನ ಕಾಳಜಿ ಮಾಡಬೇಕು: ನಟಿ ಅದಿತಿ

aditi prabhudeva
Published on

ಬೆಂಗಳೂರು: ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ ರೇಪ್​ ಪ್ರಕರಣವನ್ನು ಖಂಡಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಆಗ್ರಹ ಎಲ್ಲೆಡೆ ದಟ್ಟವಾಗಿ ಕೇಳಿಬಂದಿದೆ. ಈ ಪ್ರಕರಣ ಸಂಬಂಧ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರು ಕಳವಲ ವ್ಯಕ್ತ ಪಡಿಸಿದ್ದಾರೆ. 'ನಮ್ಮ ಸಮಾಜದಲ್ಲಿ ಇನ್ನೂ ಕೆಟ್ಟ ಹುಳುಗಳಿದ್ದಾವೆ ಅಂದ್ರೆ ಬೇಸರ ಆಗುತ್ತೆ. ಗ್ಯಾಂಗ್ ರೇಪ್​ ಮಾಡ್ತಾರೆ ಅಂದ್ರೆ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅದಿತಿ, ಇಂತಹ ಘಟನೆ ನಡೆದಾಗ ನೋವಾಗುತ್ತೆ, ಭಯ ಆಗುತ್ತೆ, ಸಿಟ್ಟು ಬರುತ್ತೆ. ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಕಡಿವಾಣ ಹಾಕೋಕೆ ಆಗ್ತಿಲ್ಲ. ಮತ್ತೆ ಮತ್ತೆ ನಡೆಯುತ್ತಲೇ ಇದೆ. ಗಂಡು ಹೆಣ್ಣಿಗೆ ಶಕ್ತಿಯಾಗಿ ನಿಲ್ಲಬೇಕು. ನೋಡುಗರ ದೃಷ್ಟಿ ಬದಲಾಗಬೇಕು. ಗಂಡು ಮಕ್ಕಳೇ ನಮ್ಮನ್ನ ಕಾಳಜಿ ಮಾಡಬೇಕು ಎಂದರು. ಸಂಸ್ಕಾರದಿಂದ ವರ್ತಿಸೋದನ್ನ ಕಲಿಯಿರಿ. ರಂಗನಾಯಕಿ ಸಿನಿಮಾದಲ್ಲಿ ಈ ಘಟನೆ ಬಗ್ಗೆಯೇ ಕಥೆಯಿದೆ. ಈ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net