ನಟ ಅಜಯ್​ ರಾವ್​ರ ಮೇಕಪ್​ ಮ್ಯಾನ್​ ಕರೊನಾಗೆ ಬಲಿ

ajay rao
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಅಜಯ್​ ರಾವ್​ ಅವರ ಪರ್ಸನಲ್​ ಮೇಕಪ್​ ಮ್ಯಾನ್​ ಜಯರಾಮ್​ ಕರೊನಾಗೆ ಬಲಿಯಾಗಿದ್ದಾರೆ.

'ಜಯರಾಮ್​ ಅವರು ನನಗೆ ಮೇಕಪ್​ ಮ್ಯಾನ್​ ಆಗಿದ್ದರು. ಕಳೆದ 11 ವರ್ಷದಿಂದ ನನ್ನೊಂದಿಗೆ ಇದ್ದರು. ಇದೀಗ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ. ಅವರ ನಿಧನ ಸುದ್ದಿ ಕೇಳಿ ದುಃಖವಾಯಿತು. ಜಯರಾಮ್​ರ ಆತ್ಮಕ್ಕೆ ಶಾಂತಿ ದೊರಕಲಿ' ಎಂದು ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿರುವ ನಟ ಅಜಯ್​ರಾವ್, ಜಯರಾಮ್​ ಜತೆ ತೆಗೆಸಿಕೊಂಡಿದ್ದ ಕೆಲ ಫೋಟೋಗಳನ್ನೂ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net