ಮಹಾವಂಚಕಿಗೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್​ ನಟ? ಸಾವಿರಾರು ಕೋಟಿ ರೂ. ರಹಸ್ಯ ಬಯಲು

Fraud
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿದ್ದಾಳೆ ಮಹಾವಂಚಕಿ. ಕನ್ನಡ ಸಿನಿಮಾ ನಟನೊಬ್ಬನ ಕೃಪೆಯೂ ಈಕೆ ಮೇಲಿದೆ. ಇವಳ ಬಲೆಗೆ ಬಿದ್ದವರ ಬದುಕು ಬೀದಿಪಾಲಾಗೋದು ಗ್ಯಾರಂಟಿ... ಈ ಪ್ರಕರಣದಲ್ಲಿ ಸಿಕ್ಕಿ ಮೋಸ ಹೋದವರ ಬಾಯಲ್ಲಿ ಹೊರ ಬರುತ್ತೆ ಈ ಮಾತು.

ಅಂದಹಾಗೆ ವಂಚನೆ ಆರೋಪ ಹೊತ್ತ ಮಹಿಳೆ ಹೆಸರು ಅರ್ಚನಾ. ಇವಳ ಜತೆಗೆ ಅರ್ಚನಾ ಸಹೋದರ ಹರೀಶ್​, ಶಿವಕುಮಾರ್​ ಮತ್ತು ಶ್ರೀಪತಿ ಅವರೂ ಆರೋಪಿಗಳಾಗಿದ್ದಾರೆ. ಈ ನಾಲ್ವರು ಸೇರಿ ಮಾಡಿದ ಮಹಾವಂಚನೆಯನ್ನ ಕೇಳಿದ್ರೆ ಬೆಚ್ಚಿಬೀಳ್ತೀರಿ. ಇದನ್ನೂ ಓದಿರಿ ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಬೆಂಗಳೂರು, ಹೈದರಬಾದ್, ಮುಂಬೈನಲ್ಲಿ ಅರ್ಚನಾ ತನ್ನ ವಂಚನೆಯ ಬಲೆಯನ್ನ ಬೀಸಿದ್ದಳು. ನನ್ನ ಬಳಿ ರೈಸ್ ಪುಲ್ಲಿಂಗ್ ಚೆಂಬು ಇತ್ತು. ಅದನ್ನು ವಿದೇಶದ ವ್ಯಕ್ತಿಗೆ ಮಾರಾಟ ಮಾಡಿದ್ದು, 6 ಲಕ್ಷ 36 ಸಾವಿರ ಕೋಟಿ ರೂಪಾಯಿ ಆರ್​ಬಿಐಗೆ ಬಂದಿದೆ. ಆ ಹಣವನ್ನ ಪಡೆಯಲು 240 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಕಟ್ಟಲು ಹಣವಿಲ್ಲ. ನೀವು ಕೊಟ್ಟರೆ ತೆರಿಗೆ ಪಾವತಿಸಿ ಆರ್​ಬಿಐ ನಿಂದ ಎಲ್ಲ ಹಣವನ್ನೂ ಪಡೆಯುವೆ. ಆ ಕೂಡಲೇ ನಿಮ್ಮ ಹಣವನ್ನ ವಾಪಸ್​ ಮಾಡುವೆ ಎಂದು ಕಥೆ ಹೇಳಿ ಹಲವರ ಬಳಿ ಕೋಟಿ ಕೋಟಿ ಹಣ ಪೀಕಿದ್ದಾಳೆ. ಅದೇ ರೀತಿ ಬೆಂಗಳೂರು ಮೂಲದ ಉದ್ಯಮಿ ವಂಶಿಕೃಷ್ಣ ಬಳಿ 2.2.ಕೋಟಿ ಹಣ ಪಡೆದು ಕೈ ಎತ್ತಿದ್ದಾಳೆ ಎಂದು ವಂಶಿಕೃಷ್ಣ ಚಿಕ್ಕಬಳ್ಳಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಚನಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೇ ವೇಳೆ ವಂಚಕಿಗೆ ಸ್ಯಾಂಡಲ್​ವುಡ್ ನಟನೊಬ್ಬನ ಸಾಥ್ ಇದೆ ಎಂಬ ಮಾತು ಕೇಳಿಬಂದಿದೆ. ಆದರೆ, ದೂರಿನಲ್ಲಿ ಆ ನಟನ ಹೆಸರು ಪ್ರಸ್ತಾಪ ಆಗಿಲ್ಲ. (ದಿಗ್ವಿಜಯ ನ್ಯೂಸ್​, ಚಿಕ್ಕಬಳ್ಳಾಪುರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net