ಹಿಂದು ಯುವತಿಯನ್ನ ಮದ್ವೆಯಾದ 7 ಮಕ್ಕಳ ತಂದೆ! ಖಾಸಗಿ ದೃಶ್ಯ ಸೆರೆಹಿಡಿದು ಇಸ್ಲಾಂಗೆ ಮತಾಂತರ

love jihad
Published on

ಲಕ್ನೋ: 7 ಮಕ್ಕಳ ತಂದೆಯೊಬ್ಬ, ತನಗೆ ಮದುವೆಯೇ ಆಗಿಲ್ಲ ಎಂದು ಹಿಂದು ಯುವತಿಯೊಬ್ಬಳನ್ನ ಯಾಮಾರಿಸಿ ಮದುವೆ ಆಗಿದ್ದಾನೆ. ಅಲ್ಲದೆ ಖಾಸಗಿ ದೃಶ್ಯಗಳನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವುದಾಗಿ ಬ್ಲ್ಯಾಕ್​ಮೇಲ್​ ಮಡುತ್ತಾ ಬಲವಂತವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಬೀದ್​ ಎಂಬಾತ ತಾನು ಆದಿತ್ಯ ಸಿಂಗ್ ಎಂದು ಯುವತಿಯೊಬ್ಬಳನ್ನ ಪರಿಚಯಿಸಿಕೊಂಡಿದ್ದ. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದಿತ್ಯ ಸಿಂಗ್​ನ ​ಅಸಲಿ ಮುಖ ಮದುವೆಯಾದ ಮೇಲೆ ಯುವತಿಗೆ ಗೊತ್ತಾಗಿದೆ. ಆ ನಂತರ ಆಕಯ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು ಆತ ಹೆದರಿಸಿದ್ದ. ಅಲ್ಲದೆ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದ್ದಾನೆ ಎಂದು ಸಂತ್ರಸ್ತ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಮೇಲ್ನೋಟಕ್ಕೆ ಇದು​ ಜಿಹಾದ್ ಜಿಹಾದ್​ ಅನ್ನಿಸಿದೆಯಾದರೂ ತನಿಖೆ ಬಳಿಕ ಬಯಲಾಗಲಿದೆ. ​

ಈ ಘಟನೆ ಉತ್ತರ ಪ್ರದೇಶದ ಲಕ್ನೋ ಸಮೀಪದ ಗಾಜಿಪುರ್​ನಲ್ಲಿ ಸಂಭವಿಸಿದೆ. ಅಬಿದ್​ಗೆ ಈ ಹಿಂದೆ ಮದುವೆಯಾಗಿದ್ದು, 7 ಮಕ್ಕಳಿವೆ. ಅಲ್ಲದೆ, ಕಳೆದ ಫೆಬ್ರವರಿಯಲ್ಲಿ ಹಿಂದು ಮಹಿಳೆಯೊಬ್ಬರನ್ನ ಯಾಮಾರಿಸಿ ಅಬಿದ್ ಮದುವೆಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಆರೋಪಿ ಅಬೀದ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net