

ಶ್ರೀನಗರ: 26 ಸೈನಿಕರನ್ನು ಕರೆದೊಯ್ಯುತ್ತಿದ್ದ ಭಾರತೀಯ ಸೇನಾ ವಾಹನ ಮಾರ್ಗಮಧ್ಯೆ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿದ್ದು, 7 ಯೋಧರು ಮೃತಪಟ್ಟ ದುರ್ಘಟನೆ ಜಮ್ಮು-ಕಾಶ್ಮೀರದ ತುರ್ತುಕ್ ಸೆಕ್ಟರ್ನ ಲಡಾಖ್ನಲ್ಲಿ ಶುಕ್ರವಾರ ಸಂಭವಿಸಿದೆ.
7 ಯೋಧರು ಹುತಾತ್ಮರಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ವಿಮಾನದ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್ನಿಂದ ಮುಂದಿನ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆ ಪ್ರಯಾಣಿಸುತ್ತಿತ್ತು. ಥೋಯಿಸ್ನಿಂದ 25 ಕಿ.ಮೀ. ದೂರ ಚಲಿಸಿದ ಸೇನಾ ವಾಹನ, ಮಾರ್ಗಮಧ್ಯೆ ಸ್ಕಿಡ್ ಆಗಿ ಶ್ಯೋಕ್ ನದಿಗೆ ಬಿದ್ದಿದೆ. 50-60 ಅಡಿ ಆಳಕ್ಕೆ ಮಿಲಿಟರಿ ವಾಹನ ಬಿದ್ದಿದ್ದು, 7 ಯೋಧರು ಹುತಾತ್ಮರಾಗಿದ್ದರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.