ಮದ್ವೆಗೆ ಹೋಗಿದ್ದೆ, ಮಲಗಲು ಕೋಣೆಗೆ ಹೋಗುವಾಗ ದಾರೀಲಿ ಚಿನ್ನದ ಸರ ಸಿಕ್ತು.. ದಯವಿಟ್ಟು ವಾರಸುದಾರರಿಗೆ ತಲುಪಿಸಿ ಸರ್​...

New Project(8)
Published on

ಮಂಡ್ಯ: ರಸ್ತೆಯಲ್ಲಿ ಒಂದು ರೂಪಾಯಿ ಕಾಯಿನ್​ ಕಂಡರೂ ಕಳ್ಳಬೆಕ್ಕಿನಂತೆ ಎತ್ತಿಕೊಂಡು ಹೋಗುವ ಜನರೇ ಹೆಚ್ಚು. ಇನ್ನು ಚಿನ್ನ ಸಿಕ್ಕರೆ ಬಿಡ್ತಾರಾ? ಆದರೆ ಇಲ್ಲೊಬ್ಬ ಯುವಕ ದಾರಿಯಲ್ಲಿ ಸಿಕ್ಕ 33 ಗ್ರಾಂ ತೂಕದ ಚಿನ್ನದ ಸರವನ್ನು ತಾನು ಇಟ್ಟುಕೊಳ್ಳದೆ ಪೊಲೀಸ್ ಠಾಣೆಗೆ ನೀಡಿ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ.

ಇಂತಹ ಅಪರೂಪದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಚಂದ್ರಶೇಖರ್​ ಗುರುವಾರ ರಾತ್ರಿ ಕುಟುಂಬಸ್ಥರ ಜತೆ ಸಂಬಂಧಿಕರ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದ. ನಿದ್ರೆ ಮಾಡಲು ರೂಂಗೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಚಿನ್ನದ ಸರ ಸಿಕ್ಕಿತ್ತು. ಬಳಿಕ ಅದನ್ನು ತೆಗೆದುಕೊಂಡು ರೂಂಗೆ‌ ಹೋದ ಚಂದ್ರಶೇಖರ್, ಶುಕ್ರವಾರ ಬೆಳಗ್ಗೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ವಾರಸುದಾರರಿಗೆ ತಲುಪಿಸಿ ಎಂದು ಪೊಲೀಸರಿಗೆ ನೀಡಿದ್ದಾನೆ. ಚಂದ್ರಶೇಖರ್‌ನ ಪ್ರಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net