

ಸೂರತ್: ಸಾಮಾನ್ಯವಾಗಿ ನಾವು ನೋಡಿರುವಂತೆ ( Video Viral ) ಆಹಾರಪ್ರಿಯರು ಪಾನಿಪುರಿ, ಗೋಲ್ಗಪ್ಪ, ಗೋಬಿಯಂತಹ ತಿನಿಸುಗಳನ್ನು ಇಷ್ಟಪಟ್ಟು ಸೇವಿಸಿ ಆನಂದಿಸುತ್ತಾರೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಹೆಚ್ಚಿನವರು ಬೀದಿಬದಿ ಗೋಲ್ಗಪ್ಪ ಸವಿದು ಆನಂದಿಸುತ್ತಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಹಲವು ಬಾರಿ ವೈರಲ್ ಆಗಿದೆ.
ಇದೀಗ 14 ವರ್ಷದ ಹುಡುಗನೋರ್ವ ಗುಜರಾತ್ನ ಸೂರತ್ನ ಬೀದಿಬದಿ ಅಂಗಡಿಯೊಂದರಲ್ಲಿ ಮಿಂಚಿನ ವೇಗದಲ್ಲಿ ಗೋಲ್ಗಪ್ಪ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಲಂಕಾಧಿಪತಿ ರಾವಣನ ಗರ್ವ ಇಳಿಸಿದ ಮಹಾಗಣಪತಿ
06ನೇ ವಯಸ್ಸಿನಿಂದಲೇ ಈ ಹುಡುಗ ಗೋಲ್ಗಪ್ಪ ತಯಾರಿಸುವಲ್ಲಿ ನಿಪುಣತೆಯನ್ನು ಹೊಂದಿದ್ದು, ಈತನ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈತ ಪ್ರತಿದಿನ ಸರಿಸುಮಾರು 40,000 ಗೋಲ್ಗಪ್ಪಗಳನ್ನು ತಯಾರಿಸಿ ಮಾರಾಟ ಮಾಡುತ್ತಾನೆ ಎಂದು ಹೇಳಲಾಗಿದ್ದು, ಅತಿ ಕಿರಿಯ ವಯಸ್ಸಿಗೆ ಈತನ ಶ್ರಮವನ್ನು ಕಂಡು ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಈ ವೈರಲ್ ವಿಡಿಯೋವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಆಹಾರಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದು, ಬಾಲಕನಿಗೆ ಶುಭ ಹಾರೈಸುತ್ತಿದ್ದಾರೆ. ಕೆಲವರು ಅಡುಗೆ ಮಾಡುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.