

ನವದೆಹಲಿ: ಕಾಮುಕರ ಕ್ರೌರ್ಯಕ್ಕೆ ಮಿತಿಯೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇನ್ನೊಂದು ಅಮಾನವೀಯ ಘಟನೆ ನವದೆಹಲಿಯ ನಜಾಫ್ಗಢ್ದಲ್ಲಿ ನಡೆದಿದೆ. 90 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ, ನಂತರ ಮನಬಂದಂತೆ ಥಳಿಸಲಾಗಿದೆ.
ಮುಂಜಾನೆ 5 ಗಂಟೆ ಹೊತ್ತಿಗೆ ಈ ವೃದ್ಧೆ ಮನೆಯ ಎದುರು ಕುಳಿತು ಹಾಲಿನವನಿಗಾಗಿ ಕಾಯುತ್ತಿದ್ದರು. ಅಲ್ಲಿಗೆ ಬಂದ ಅಪರಿಚಿತನೋರ್ವ ಹಾಲಿನವನು ಇಂದು ಬರುವುದಿಲ್ಲ. ನಾನೇ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ. ಇದನ್ನೂ ಓದಿ: VIDEO: ಸರ್ಫಿಂಗ್ ಆಡಲು ಹೋಗಿದ್ದ ಕರೊನಾ ಸೋಂಕಿತಳನ್ನು ಬೆನ್ನಟ್ಟಿದ ಪೊಲೀಸರು; ಆಕೆ ಮಾಡಿದ್ದೇನು?
ಆದರೆ ಆ ಕಾಮುಕ ವೃದ್ಧೆಯನ್ನು ರೇವ್ಲಾ ಖಾನಾಪುರ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ವೃದ್ಧೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ನಾನು ನಿನ್ನ ಅಜ್ಜಿಯ ಸಮಾನ ಬಿಟ್ಟುಬಿಡು ಎಂದು ಅವರು ಎಷ್ಟೇ ಕೂಗಿಕೊಂಡರೂ ಅವನು ಬಿಡಲಿಲ್ಲ. ವೃದ್ಧೆಯೂ ಸಹ ಒಂದೇ ಸಮ ಕೂಗಲು ಶುರು ಮಾಡಿದರು. ಅವರ ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಸೋನು ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರಿಂದ ಬಂಧಿತನಾಗಿದ್ದಾನೆ. (ಏಜೆನ್ಸೀಸ್)