

ನೋಯ್ಡಾ: ಯುವಕನೋರ್ವ ಯಾವುದೋ ಕೀಟ ಕಡಿದು ಮೃತಪಟ್ಟ ದುರ್ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಹರಿರಾಮ್ (20) ಮೃತ. ಈತ ಬಿಹಾರದ ಮೋತಿಹಾರಿಯವನು. ಗ್ರೇಟರ್ ನೋಯ್ಡಾದ ಬಿಸ್ರಾಖ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ; ಸರ್ಕಾರದ ಮಟ್ಟದಲ್ಲಿಯೇ ನಡೆಯಬೇಕಿದೆ ಚರ್ಚೆ; ಜೈಶಂಕರ್ ಕಳವಳ
ಯಾವುದೋ ಹುಳ ಆತನಿಗೆ ಕಚ್ಚಿದ ಬಳಿಕ ಅಸ್ವಸ್ಥನಾಗಿದ್ದ. ಇಡೀ ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾನೆ. ಆದರೆ ಕಚ್ಚಿದ್ದು ಯಾವ ಹುಳ ಎಂಬುದು ಗೊತ್ತಾಗಲಿಲ್ಲ. ಮೃತದೇಹವನ್ನು ಪೋಸ್ಟ್ಮಾರ್ಟಂಗೆ ಕಳಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಸಾವಿಗೆ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)