More

    VIDEO: ಸರ್ಫಿಂಗ್​ ಆಡಲು ಹೋಗಿದ್ದ ಕರೊನಾ ಸೋಂಕಿತಳನ್ನು ಬೆನ್ನಟ್ಟಿದ ಪೊಲೀಸರು; ಆಕೆ ಮಾಡಿದ್ದೇನು?

    ಕರೊನಾ ಸೋಂಕಿತರು ಕ್ವಾರಂಟೈನ್ ಕೇಂದ್ರದಿಂದ, ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿಹೋದ ಘಟನೆಗಳು ಅದೆಷ್ಟೋ ನಡೆದುಹೋಗಿವೆ. ಇದು ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ನಡೆದಿದೆ. ಅದೆಷ್ಟೋ ಜನ ದೇಹದಲ್ಲಿ ಸೋಂಕು ಇಟ್ಟುಕೊಂಡು ಎಲ್ಲೆಡೆ ಓಡಾಡಿದವರೂ ಇದ್ದಾರೆ. ಎಲ್ಲ ನಿಯಮಗಳನ್ನೂ ಧಿಕ್ಕರಿಸಿ ಮನಬಂದಂತೆ ವರ್ತಿಸಿದವರೂ ಇದ್ದಾರೆ.

    ಸರ್ಕಾರಗಳೂ ಅಷ್ಟೇ ನಿರಂತರವಾಗಿ ಎಚ್ಚರಿಕೆ ನೀಡುತ್ತ ಬಂದಿದ್ದರೂ ಅನಾಗರಿಕರಂತೆ ವರ್ತಿಸುವುದನ್ನು ಹಲವರು ಬಿಟ್ಟಿಲ್ಲ.

    ಸ್ಪೇನ್​ನಲ್ಲಿ ಇತ್ತೀಚೆಗೆ ಕರೊನಾ ಸೋಂಕಿತ ಮಹಿಳೆಯೋರ್ವಳು ಜುರಿಯೊಲಾ ಬೀಚ್​​ನಲ್ಲಿ ಸರ್ಫಿಂಗ್ ಮಾಡಿದ್ದಾಳೆ. ಕರೊನಾ ಸೋಂಕಿನ ತಪಾಸಣೆಗೆ ಒಳಪಟ್ಟಿದ್ದ ಆಕೆಯಲ್ಲಿ ಪಾಸಿಟಿವ್​ ಎಂದು ವರದಿ ಬಂದಿತ್ತು. ಆದರೆ ಆಕೆ ಕ್ವಾರಂಟೈನ್​ ಆಗದೆ ಸೀದಾ ಹೋಗಿ ಸಮುದ್ರದಲ್ಲಿ ಅಲೆಗಳ ಆಟ ಸರ್ಫಿಂಗ್​​ನಲ್ಲಿ ತೊಡಗಿಕೊಂಡಿದ್ದಳು. ಇದನ್ನೂ ಓದಿ: ಕೊನೆಗೂ ಎನ್​ಸಿಬಿ ಅಧಿಕಾರಿಗಳ ಎದುರು ಸತ್ಯ ಬಾಯ್ಬಿಟ್ಟ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ

    ಮಾಹಿತಿ ಸಿಕ್ಕ ಕೂಡಲೇ ಪೊಲೀಸ್​ ಅಧಿಕಾರಿಗಳು ಪಿಪಿಇ ಕಿಟ್​ ಧರಿಸಿ ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಆದರೆ ಮಹಿಳೆ ಸರ್ಫಿಂಗ್​ ನಿಲ್ಲಿಸಲು ಮೊದಲು ನಿರಾಕರಿಸಿದಳು. ನಂತರ ಸಮುದ್ರದಿಂದ ಈಚೆಗೆ ಬಂದರೂ, ಪೊಲೀಸರ ಕೈಗೆ ಸಿಗಬಾರದೆಂದು ಬೀಚ್​​ನಲ್ಲಿ ಓಡಿದ್ದಾಳೆ. ಮರಳಿನಲ್ಲಿ ಕುಳಿತು ರಚ್ಚೆ ಹಿಡಿದಿದ್ದಾಳೆ. ನಂತರ ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗಿದೆ.

    ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದ ಆರೋಪದಡಿ ಈಕೆಯನ್ನು ಬಂಧಿಸಲಾಗಿತ್ತು. ನಂತರ ಕೆಲ ತಾಸುಗಳ ಬಳಿಕ ಬಿಡುಗಡೆ ಮಾಡಿದ್ದು, ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. (ಏಜೆನ್ಸೀಸ್)

    ರಷ್ಯಾ ಲಸಿಕೆ ಭಾರತದಲ್ಲಿ ಉತ್ಪಾದನೆ; ಖಚಿತಪಡಿಸಿದ ಕೇಂದ್ರ; ವರ್ಷಾಂತ್ಯಕ್ಕೆ 4 ಲಸಿಕೆಗಳು ಸಿಗೋದು ಪಕ್ಕಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts