7,027 ಮಹಿಳೆಯರಿಂದ ವಿಶ್ವ ದಾಖಲೆ; ಲಿಮ್ಕಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲು

Kerala Record
Published on

ಕೇರಳ: ಏಳು ಸಾವಿರಕ್ಕೂ ಅಧಿಕ ಮಹಿಳೆಯರಿಂದ ವಿಶ್ವ ದಾಖಲೆ ಆಗಿದ್ದು, ಇದೀಗ ಅವರು ಗಿನ್ನೆಸ್​ ಬುಕ್ ಆಫ್ ವರ್ಲ್ಡ್​ ರೆಕಾರ್ಡ್ಸ್ ಮೇಲೂ ಕಣ್ಣಿಟ್ಟಿದ್ದಾರೆ. ಕೇರಳದ ಈ ಮಹಿಳೆಯರು ಇಂಥದ್ದೊಂದು ಸಾಧನೆ ಮಾಡಿದ್ದಾರೆ.

ಕೇರಳದ ಕುಡುಂಬಶ್ರೀ ಮಹಿಳೆಯರ ಒಂದು ಸಂಘಟನೆ ಈ ಸಾಧನೆ ಮಾಡಿದೆ. ಇಲ್ಲಿನ ಕುಟ್ಟನೆಲ್ಲೂರು ಸರ್ಕಾರಿ ಕಾಲೇಜಿನಲ್ಲಿ 7,027 ಮಹಿಳೆಯರು ಸೇರಿ ತಿರುವತ್ತಿರ ನೃತ್ಯದ ಮೂಲಕ ಈ ದಾಖಲೆ ಮಾಡಿದ್ದಾರೆ.

ಸರ್ಕಾರ ವತಿಯಿಂದ ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಓಣಂ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ನೃತ್ಯ ಲಿಮ್ಕಾ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಟ್ಯಾಲೆಂಟ್​ ರೆಕಾರ್ಡ್ ಬುಕ್​ನಲ್ಲಿ ಈ ದಾಖಲೆ ಸೇರಿದ್ದು, ಇವರು ಮುಂದೆ ಗಿನ್ನೆಸ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ ಮೇಲೂ ಕಣ್ಣಿಟ್ಟಿದ್ದು, ಆ ತಯಾರಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net