ಖಲಾಸೀ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ವೃದ್ದೆ; ವಿಡಿಯೋ ವೈರಲ್

Dancing Dadi
Published on

ನವದೆಹಲಿ: ನೆಟ್ಟಿಗರ ಕಣ್ಮಣಿ, ಡ್ಯಾನ್ಸಿಂಗ್​ ದಾದಿ ಎಂದೇ ಹೆಸರುವಾಸಿಯಾಗಿರುವ ರವಿ ಬಾಲ ಶರ್ಮಾ ಅವರು ತಮ್ಮ ನೃತ್ಯದ ಮೂಲಕ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇವರು ಬಾಲಿವುಡ್​ ಸೇರಿದಂತೆ ಬೇರೆ ಬೇರೆ ಹಾಡುಗಳಿಗೆ ಮಾಡುವ ಡ್ಯಾನ್ಸ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ.

ಇದೀಗ ನವರಾತ್ರಿ ಸಂದರ್ಭದಲ್ಲಿ ಕೋಕ್​ ಸ್ಟುಡಿಯೋದವರು ಬಿಡುಗಡೆ ಮಾಡಿದ್ದ ಖಲಾಸಿ ಹಾಡಿಗೆ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹಳದಿ ಬಣ್ಣದ ಸೀರೆಯುಟ್ಟು ಹೆಜ್ಜೆ ಹಾಕಿರುವ ರವಿ ಬಾಲ ಶರ್ಮಾ ನೃತ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ವಯರಲ್ ಆಗಿರುವ ವಿಡಿಯೋದಲ್ಲಿ ಅಜ್ಇ ಖಲಾಸಿ ಹಾಡಿಗೆ ಹೆಜ್ಜೆ ಹಾಕಿದ್ದು, ಈವರೆಗೂ 8 ಲಕ್ಷಕ್ಕೂ ಅಧಿಕ ಭಾರಿ ವೀಕ್ಷಣೆಗೆ ಒಳಪಟ್ಟಿದೆ. ನಯನಮನೋಹರವಾದ ಈ ನೃತ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ನಿಮ್ಮ ಶಕ್ತಿ ನಿಜಕ್ಕೂ ಅದ್ಭುತ ಎಂದಿದ್ದಾರೆ ಒಬ್ಬರು. ನೀವು ಸ್ಫೂರ್ತಿಯ ಗಣಿ ಎಂದಿದ್ದಾರೆ ಇನ್ನೊಬ್ಬರು. ಸೂಪರ್ ದಾದೀಮಾ ಎಂದಿದ್ದಾರೆ ಮತ್ತೊಬ್ಬರು.

ನೀವು ನೋಡಲು ಬಹಳ ಸುಂದರವಾಗಿದ್ದೀರಿ, ವಯಸ್ಸು ಎನ್ನುವುದು ಕೇವಲ ಅಂಕಿ ಸಂಖ್ಯೆ ಎನ್ನುವುದನ್ನು ನಿರೂಪಿಸಿದ್ದೀರಿ ಎಂದಿದ್ದಾರೆ ಒಬ್ಬರು. ನಿಮಗೆ ವಯಸ್ಸೇ ಆಗುವುದಿಲ್ಲ, ಯುವತಿಯರೂ ಕೂಡ ನಾಚುವಂತೆ ನರ್ತಿಸುತ್ತೀರಿ ಎಂದಿದ್ದಾರೆ ಇನ್ನೊಬ್ಬರು. ನನಗೂ ಈಗ ಈ ಹಾಡಿಗೆ ಡ್ಯಾನ್ಸ್ ಮಾಡಬೇಕು ಅನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net