VIDEO| ಮನುಷ್ಯನನ್ನು ಮುದ್ದಾಡಿದ ಮೊಸಳೆ; ನೋಡಲು ಎಷ್ಟು ಮುದ್ದಾಗಿದೆ ಎಂದ ನೆಟ್ಟಿಗರು

Alligator Cuddling
Published on

ನವದೆಹಲಿ: ಭೂಮಿ ಮೇಲಿರುವ ಅತ್ಯಂತ ಭಯನಾಕ ಜಲ ಸರೀಸೃಪಗಳೆಂದರೆ ಮೊದಲಿಗೆ ಎಲ್ಲರ ಬಾಯಿಗೆ ಬರುವ ಹೆಸರೆಂದರೆ ಅದು ಮೊಸಳೆಯದ್ದು, ಅದು ನೋಡಲು ಎಷ್ಟು ಭಯಂಕರವಾಗಿರುತ್ತದೋ ಅದು ಬಾಯಿ ತೆರೆದರಂತೂ ಮುಗಿದೇ ಹೋಯಿತು. ಇನ್ನು ಮೈಮೇಲೆ ಬಿದ್ದರೆ ಆತನ ಗತಿ ಏನಾಗಬಹುದೆಂದು ಯಾರು ಊಹಿಸಲು ಸಾಧ್ಯವಿಲ್ಲ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೊಸಳೆಯೊಂದು ಮನುಷ್ಯನನ್ನು ಅಪ್ಪಿ ಮುದ್ದಾಡುತ್ತಿರುವುದು ವೈರಲ್​ ಆಗಿದೆ. ಈ ವಿಡಿಯೋ ನೋಡಲು ಅಷ್ಟೇ ಭಯಂಕರ ಅಷ್ಟೇ ಮಜವಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮೊಸಳೆಯೊಂದು ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಎರಗಿದ್ದು, ಆತನನ್ನು ಮುದಾಡಲು ಶುರು ಮಾಡುತ್ತದೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, jayprehistoricpets ಎಂಬ ಚಾನಲ್​ನಲ್ಲಿ ವಿಡಿಯೋ ಅಪ್ಲೋಡ್​ ಮಾಡಲಾಗಿದೆ. ಇಲ್ಲಿಯವರೆಗೂ ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆಗೆ ಒಳಪಟ್ಟಿದೆ.

ಕೆಲವರು ಈ ದೃಶ್ಯ ನೋಡಲು ಎಷ್ಟು ಮುದ್ದಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಇದು ನೋಡಲು ಎಷ್ಟು ಮುದ್ದಾಗಿದೆಯೋ ಅಷ್ಟೇ ಭಯಂಕರವಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮಗ ಅಪ್ಪನನ್ನು ಪ್ರೀತಿಸುವ ಪರಿ ಎಂದಿದ್ದಾರೆ ಒಬ್ಬರು. ಬಾಯಿಗೆ ಅಂಟಿಸಿದ ಟೇಪ್​ ತೆಗೆದು ಮುದ್ದಾಡಿಸಿಕೊಂಡು ನೋಡಿ ಒಮ್ಮೆ ಎಂದಿದ್ದಾರೆ ಇನ್ನೊಬ್ಬರು. ಟೇಪ್​ ತೆಗೆದು ಮುದ್ದಾಡಿಸಿಕೊಂಡ ಮೇಲೆ ಹೀಗೆಯೇ ನಗುತ್ತಲೇ ಇರುವಿರೋ ಎಂದು ಕೆಲವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net