More

    ಕ್ರಿಕಟ್ ದಿಗ್ಗಜನ ದಾಖಲೆ ಮುರಿದ ಬೆನ್ನಲ್ಲೇ ಕೊಹ್ಲಿಯನ್ನು ಸ್ವಾರ್ಥಿ ಎಂದ ಪಾಕ್ ಮಾಜಿ ಕ್ರಿಕೆಟಿಗ; ವ್ಯಾಪಕ ಟೀಕೆ

    ನವದೆಹಲಿ: ಭಾನುವಾರ (ನವೆಂಬರ್ 05) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿರ್ಶವಕಪ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಮಾಸ್ಟರ್​ ಬ್ಲ್ಯಾಸ್ಟರ್​ ಸಚಿನ್​ ತೆಂಡುಲ್ಕರ್​ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತ ಕೊಹ್ಲಿ ನೂತನ ದಾಖಲೆಗೆ ವಿಶ್ವದಾದ್ಯಂತೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಆದರೆ, ವಿರಾಟ್​ ಕೊಹ್ಲಿ ಅವರ 49ನೇ ಶತಕ ಸಾಧನೆಗೆ ಹಾಲಿ, ಮಾಜಿ ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಕೊಹ್ಲಿ ಶತಕ ಸಾಧನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಹಫೀಜ್ ಸ್ವಾರ್ಥಿ ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ​

    ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಮಾಡುವ ವೇಳೆ ನಾನು ಅವರಲ್ಲಿ ತುಂಬಿದ್ದ ಸ್ವಾರ್ಥವನ್ನು ನೋಡಿದೆ. ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ಮೂರನೇ ಬಾರಿ ಅವರು ಹೀಗೆ ಮಾಡುತ್ತಿರುವುದು. 49ನೇ ಓವರ್​ನಲ್ಲಿ ಶತಕ ಗಳಿಸಿದ ಅವರು ತಂಡದ ಪರವಾಗಿ ಆಡಿದಂತೆ ಕಾಣಲಿಲ್ಲ. ಅವರು ದೊಡ್ಡ ಹೊಡೆತಗಳಿಗೆ ಕೈಹಾಕದೆ ಬರೀ ಸಿಂಗಲ್ಸ್​ನಲ್ಲಿ ಆಡಿದ್ದನ್ನು ನೋಡಿದರೆ ಇದು ಅವರ ವೈಯಕ್ತಿಕ ಕಾರಣಗಳಿಗೆ ಆಡಿದಂತ್ತಿತ್ತು.

    ಇದನ್ನೂ ಓದಿ: ಟೈಮ್ ಔಟ್ ವಿವಾದ; ಬಾಂಗ್ಲಾದಿಂದ ಇಂತಹ ಕೀಳು ಮಟ್ಟದ ಆಟವನ್ನು ನಿರೀಕ್ಷಿಸಿರಲಿಲ್ಲ: ಏಂಜಲೊ ಮ್ಯಾಥ್ಯೂಸ್

    ವಿರಾಟ್​ ಕೊಹ್ಲಿ ರೋಹಿತ್​ ಶರ್ಮಾ ರೀತಿ ಬಿರುಸಿನ ಆಟಕ್ಕೆ ಕೈ ಹಾಕಬೇಕಿತ್ತು. ಒಂದು ಬೇಳ ಹಾಗೆ ಮಾಡಿದ್ದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಬೃಹತ್​ ಮೊತ್ತವನ್ನು ಪೇರಿಸಬಹುದಿತ್ತು. ವಿರಾಟ್​ ಸ್ವಾರ್ಥ ಆಟದಿಂದಾಗಿ ರನ್​ಗಳಿಕೆಯಲ್ಲಿ ಭಾರತ ತಂಡ ಹಿಂದೆ ಬಿದ್ದಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಹಫೀಜ್​ ತಿಳಿಸಿದ್ದಾರೆ.

    ಹಫೀಜ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಮೈಕಲ್​ ವಾಗನ್​, ನೀವು ನೀಡಿರುವ ಹೇಳಿಕೆ ಸಂಪೂರ್ಣ ಅಸಂಬದ್ದವಾಗಿದ್ದು, 8 ತಂಡಗಳ ವಿರುದ್ಧ ಗೆದ್ದಿರುವ ಭಾರತದ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಪಿಚ್​ ಹೇಗೆ ವರ್ತಿಸುತ್ತದೋ ಅದಕ್ಕೆ ತಕ್ಕಂತೆ ವಿರಾಟ್​ ಕೊಹ್ಲಿ ಆಟವಾಡಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಹಫೀಜ್​ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts