More

    ದೆಹಲಿ ವಾಯುಮಾಲಿನ್ಯ ತಡೆ; ಮೋಡ ಬಿತ್ತನೆಗೆ ಮುಂದಾದ ಕೇಜ್ರಿವಾಲ್​ ಸರ್ಕಾರ

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಹದಗೆಡುತ್ತಿದ್ದು, ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿನ್ನಲೆಯಲ್ಲಿ ಮೋಡ ಬಿತ್ತನೆ ನಡೆಸಿ ಕೃತಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪರಿಸರ ಖಾತೆ ಸಚಿವ ಗೋಪಾಲ್​ ರೈ ತಿಳಿಸಿದ್ದಾರೆ.

    ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಂಬಂಧ ಲೆಫ್ಟಿನೆಂಟ್​ ಗವರ್ನರ್​ ಜತೆಗಿನ ಸಭೆ ಬಳಿಕ ಮಾತನಾಡಿದ ಗೋಪಾಲ್​ ರೈ ಈ ಸಂಬಂಧ ಕಾನ್ಪುರ ಐಐಟಿಯ ವಿಜ್ಞಾನಿಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದಿಂದಾಗಿ ಗಾಳಿಯ ಗುಣಮಟ್ಟ ಹದೆಗಡುತ್ತಿದ್ದು, ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿನ್ನಲೆಯಲ್ಲಿ ಮೋಡ ಬಿತ್ತನೆ ನಡೆಸಿ ಕೃತಕ ಮಲೆ ಸುರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಕಾನ್ಪುರ ಐಐಟಿಯ ವಿಜ್ಞಾನಿಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಲಾಗಿದೆ.

    ಇದನ್ನೂ ಓದಿ: VIDEO| ಮನುಷ್ಯನನ್ನು ಮುದ್ದಾಡಿದ ಮೊಸಳೆ; ನೋಡಲು ಎಷ್ಟು ಮುದ್ದಾಗಿದೆ ಎಂದ ನೆಟ್ಟಿಗರು

    ವಿಜ್ಞಾನಿಗಳು ವಾತಾವರಣದಲ್ಲಿ ಮೋಡ ಅಥವಾ ತೇವಾಂಶ ಇದ್ದರೆ ಕೃತಕ ಮಳೆ ಸುರಿಸಲು ಸಾಧ್ಯ ಎಂದು ಹೇಳಿದ್ದಾರೆ. ನವೆಂಬರ್​ 20 ಅಥವಾ 21ರ ವೇಳೆಗೆ ವಾತಾವರಣದಲ್ಲಿ ತೇವಾಂಶ ಬರಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಾವು ವಿಜ್ಞಾನಿಗಳಿಗೆ ಸೂಚಿಸಿದ್ದೇವೆ. ಅದನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗುವುದು.

    ಮೋಡ ಬಿತ್ತನೆ ಮೂಲಕ ಕೃತಕ ಮಳೆಯ ಪ್ರಯತ್ನವನ್ನು ಈಗಾಗಲೇ ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ನಡೆಸಲಾಗಿದೆ. ಜಾಗತಿಕವಾಗಿ ಇದರ ಬಗ್ಗೆ ಅಧ್ಯಯನ ನಡೆದಿದ್ದು, ಇದಕ್ಕೆ ಬೇಕಾಗಿರುವುದು ಮೋಡ ಮತ್ತು ತೇವಾಂಶ ಎಂದು ತಿಳಿದು ಬಂದಿದೆ. ಭಾರತದಲ್ಲಿ ಕೃತಕ ಮಳೆಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಈವರೆಗೆ ಗಮನಾರ್ಹ ಪ್ರಗತಿ ಸಾಧಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts