More

    ಬೆಂಗಳೂರಿನಲ್ಲಿ ಇಂದು ಕಿವೀಸ್‌ಗೆ ಮಾಡು ಇಲ್ಲವೆ ಮಡಿ ಸವಾಲು: ಜಯದ ಅನಿವಾರ್ಯದಲ್ಲಿ ವಿಲಿಯಮ್ಸನ್ ಪಡೆ

    ಬೆಂಗಳೂರು: ಆತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲಿನ ಬಳಿಕ ಸತತ 4 ಪಂದ್ಯಗಳಲ್ಲಿ ಮುಗ್ಗರಿಸಿ ಲಯ ತಪ್ಪಿರುವ ನ್ಯೂಜಿಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾಡು ಇಲ್ಲವೆ ಮಡಿ ಸವಾಲಿನ ತನ್ನ 9ನೇ ಹಾಗೂ ಕಡೇ ಲೀಗ್ ಪಂದ್ಯದಲ್ಲಿ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಈಗಾಗಲೆ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಕೈಚೆಲ್ಲಿದ್ದರೆ, ಕಳೆದ 2 ಆವೃತ್ತಿಗಳ ರನ್ನರ್‌ಅಪ್ ಕಿವೀಸ್ 3ನೇ ಯತ್ನದಲ್ಲಾದರೂ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಜೀವಂತವಿಡಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
    ಚಿನ್ನಸ್ವಾಮಿ ಅಂಗಣದಲ್ಲಿ ಆಡಿದ ಕಳೆದ ಪಂದ್ಯದಲ್ಲಿ ಪಾಕ್ ಎದುರು 400 ಪ್ಲಸ್ ರನ್ ಕಲೆಹಾಕಿದರೂ ಸೋಲು ಅನುಭವಿಸಿದ್ದ ನ್ಯೂಜಿಲೆಂಡ್ ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಲಾಕಿ ರ್ಗ್ಯುಸನ್ ಫಿಟ್ ಆಗಿದ್ದು, ಬೌಲಿಂಗ್ ವಿಭಾಗಕ್ಕೆ ಸಮತೋಲನ ತಂದುಕೊಡಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಬೆಂಗಳೂರು ಮೂಲದ ರಚಿನ್ ರವೀಂದ್ರ, ಪ್ರೇಕ್ಷಕರ ಬೆಂಬಲದೊಂದಿಗೆ ಅದೇ ಲಯ ಮುಂದುವರಿಸುವ ಹುರುಪಿನಲ್ಲಿದ್ದಾರೆ. ಆದರೆ, ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಕಿವೀಸ್ ಬೌಲರ್‌ಗಳು ವಿಲವಾಗಿರುವುದು ಹಿನ್ನಡೆ ಎನಿಸಿದೆ. ಪಾಕ್ ವಿರುದ್ಧ ಪಂದ್ಯದಲ್ಲಿ ಖರ್ ಜಮಾನ್ ಆರ್ಭಟದ ಎದುರು ಕಿವೀಸ್ ಬೌಲರ್‌ಗಳು ಸಂಪೂರ್ಣ ಮಂಕಾಗಿದ್ದರು.
    ಶ್ರೀಲಂಕಾದ ಅನನುಭವಿ ಬೌಲಿಂಗ್ ಎದುರು ಕಿವೀಸ್ ಬ್ಯಾಟರ್‌ಗಳು ಮತ್ತೆ ರನ್‌ಹೊಳೆ ಹರಿಸುವ ನಿರೀಕ್ಷೆ ಇದೆ. ಆದರೆ ಶ್ರೀಲಂಕಾ ತಂಡ ಬೆಂಗಳೂರಿನಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಏಕಪಕ್ಷೀಯವಾಗಿ ಗೆಲುವು ದಾಖಲಿಸಿದ ಆತ್ಮವಿಶ್ವಾಸ ಹೊಂದಿದೆ. ಪ್ರಮುಖ ಆಟಗಾರರ ಅಲಭ್ಯತೆಯೊಂದಿಗೆ ಕಣಕ್ಕಿಳಿದ ಲಂಕಾ ನೀರಸ ನಿರ್ವಹಣೆ ತೋರಿದ್ದು, ಬ್ಯಾಟಿಂಗ್ ವಿಭಾಗದ ಅಸ್ಥಿರ ಪ್ರದರ್ಶನ ತಂಡಕ್ಕೆ ಮುಳುವಾಗಿದೆ. ಲಂಕಾ ಉಪಾಂತ್ಯದ ರೇಸ್‌ನಿಂದ ಹೊರಬಿದ್ದಿದ್ದು, ಕನಿಷ್ಠ 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಸಂಪಾದಿಸಲು ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts