5 ವರ್ಷದ ಬಾಲಕಿಯನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ | Pune

leopard
Published on

ಪುಣೆ: ಭಾನುವಾರ (ಅ.12) ಮನೆಯಿಂದ 300 ಮೀಟರ್ ದೂರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಜ್ಜನಿಗೆ ನೀರು ಕೊಡಲು ಹೋದ ಐದು ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಪುಣೆಯ ಶಿರೂರ್ ತಾಲ್ಲೂಕಿನ ಪಿಂಪಾರ್ಖೇಡ್ ಎಂಬ ಗ್ರಾಮದಲ್ಲಿ ನಡೆದಿದೆ.

ಕಬ್ಬಿನ ಹೊಲದಲ್ಲಿ ಅಡಗಿ ಕುಳಿತ್ತಿದ್ದ ಚಿರತೆ, ಶಿವನ್ಯಾ ನೀಲೇಶ್ ಎಂಬ ಹುಡುಗಿಯ ಮೇಲೆ ದಾಳಿ ಮಾಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಅಲ್ಲೇ ಹತ್ತಿರದಲ್ಲಿದ್ದ ಮಂಚಾರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ವೈದ್ಯರು ಈಕೆಗೆ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೃತ ಶಿವನ್ಯಾಳ ಅಜ್ಜ ಅರುಣ್, ನಾನು ಆಕೆಯನ್ನು ಉಳಿಸಲು ಮುಂದಾದೆ, ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ತಕ್ಷಣ ಚಿರತೆಯನ್ನು ಬೆನ್ನಟ್ಟಿದರು. ಆದರೆ ಚಿರತೆ ಈಕೆಯ ಮೇಲೆ ದಾಳಿ ಮಾಡಿ ಸ್ಥಳದಿಂದ ಓಡಿ ಹೋಯ್ತು ಎಂದಿದ್ದಾರೆ. ಹುಡುಗಿಯ ಪೋಷಕರು ರೈತರಾಗಿದ್ದು, ಅವರಿಗೆ ಶಿವನ್ಯಾ ಜೊತೆಗೆ ಮತ್ತೊಬ್ಬ ಕಿರಿಯ ಮಗಳಿದ್ದಾಳೆ. ಕುಟುಂಬ ಸದಸ್ಯರು ಈ ಪ್ರದೇಶದಲ್ಲಿ ಮೊದಲು ಚಿರತೆಗಳನ್ನು ನೋಡಿದ್ದೇವೆ ಮತ್ತು ಸುಮಾರು ಎರಡು ವಾರಗಳ ಹಿಂದೆ ಅದು ನಮ್ಮ ನಾಯಿಯ ಮೇಲೆ ದಾಳಿ ಮಾಡಿತ್ತು ಎಂದು ಹೇಳಿದ್ದಾರೆ.

(ಏಜೆನ್ಸೀಸ್)

ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿತ್ತು. ಅವರು ಅಲ್ಲಿನ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಈ ಹಿಂದೆ ನಡೆದಿರುವ ಚಿರತೆ ದಾಳಿಯ ಘಟನೆಗಳ ಬಗ್ಗೆ ವಿವರಿಸಿದರು. ಮತ್ತು ಹೆಚ್ಚಿನ ಸಾವುನೋವುಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಘಟನೆಯ ಬಳಿಕ, ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ 10 ಚಿರತೆ ಬೋನ್​ಗಳನ್ನು ಇರಿಸಿದ್ದು, ಇಂದು (ಅ.13) ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net