ಫ್ರಿಜ್ಡ್​ ಮೇಲೆ ಅಪ್ಪಿತಪ್ಪಿಯೂ ಈ 4 ವಸ್ತುಗಳನ್ನು ಇಡಬೇಡಿ! ಇವು ನಿಮ್ಮ ಆರ್ಥಿಕ ಸ್ಥಿತಿಯನ್ನು ಕುಗ್ಗಿಸುತ್ತದೆ Vastu tips

untitled-design-2025-10-13t131209150-68ecad582ccfe
Published on

Vastu tips: ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ, ಆಲಸ್ಯತನ ಜಾಸ್ತಿಯಾಗಿರುತ್ತದೆ ಹಾಗಾಗಿ ಮನೆಯ ಒಳಗೆ ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದನ್ನು ಮಾಡುತ್ತಾರೆ. ವಾಸ್ತು ಶಾಸ್ರ್ರದ ಪ್ರಕಾರ ಮನೆಯಲ್ಲಿ ಸೂಕ್ತವಾದ ಜಾಗದಲ್ಲಿ ವಸ್ತುಗಳನ್ನು ಇಡದಿದ್ದರೆ ಇದು ನಮ್ಮನ್ನು ಆರ್ಥಿಕ ಪರಿಸ್ಥಿತಿಯಲ್ಲಿ ಕುಗ್ಗಿಸುತ್ತದೆ ಎಂದು ತಿಳಿಸಿದೆ.

ಅಂದಹಾಗೇ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೇ, ತಪ್ಪು ಜಾಗದಲ್ಲಿ ಇಟ್ಟಿದ್ದರೆ ಅದರಿಂದ ನೀವು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅನೇಕರು ಅಡುಗೆ ಮನೆಯಲ್ಲಿರುವ ಫ್ರಿಜ್ಡ್​ ಮೇಲೆ ಅನೇಕ ವಸ್ತುಗಳನ್ನು ಇಡುತ್ತಾರೆ. ಈ ರೀತಿ ಮಾಡುವುದರಿಂದ ಇದು ನಿಮ್ಮನ್ನು ಸಮಸ್ಯೆಗೆ (negativity) ತಳ್ಳಬಹುದು. ಹಾಗಾಗಿ ಯಾವ ವಸ್ತುಗಳನ್ನು ಫ್ರಿಜ್​ ಬಳಿ ಇಡಬಾರದು? ಅವುಗಳ ಹಿಂದಿನ ಕಾರಣಬವೇನು ಎಂದು ತಿಳಿಯೋಣ ಬನ್ನಿ...

1. ಹಣ ಮತ್ತು ಬಂಗಾರ

ವಾಸ್ತು ಶಾಸ್ತ್ರದ ಪ್ರಕಾರ ಫ್ರಿಜ್ಡ್​ ಮೇಲೆ ಬಂಗಾರ ಮತ್ತು ಹಣವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ನಕರಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ, ಇದರಿಂದ ಆರ್ಥಿಕ ನಷ್ಟ, ವ್ಯವಹಾರದಲ್ಲಿ ತೊಂದರೆ, ಕುಟುಂಬದಲ್ಲಿ ಗಲಭೆ ಉಂಟಾಗುತ್ತದೆ ಎಂದು ತಿಳಿಸಲಾಗುತ್ತದೆ. ಇದರಿಂದ ನಿಮ್ಮ ಸಂತೋಷಕ್ಕೆ ಅಡ್ಡಿಯಾಗಬಹುದು. ಹಾಗಾಗಿ ಹಣ ಮತ್ತು ಚಿನ್ನವನ್ನು ಯಾವುದೇ ಕಾರಣಕ್ಕೂ ಫ್ರಿಜ್ಡ್​ ಮೇಲೆ ಇಡಬೇಡಿ..

2. ಬಾಂಬೂ ಸಸ್ಯ (ಬಿದಿರಿನ ಸಸ್ಯಗಳು)

ಅನೇಕ ಜನರು (Bamboo plant) ಬಿದಿರಿನ ಗಿಡವನ್ನು ತಂದು ಮನೆಯಲ್ಲಿಡುತ್ತಾರೆ. ಇದು ಮನೆಗೆ ಸಕರಾತ್ಮಕತೆಯನ್ನು ಬೀರುತ್ತದೆ. ಆದರೆ, ಈ ಗಿಡವನ್ನು ಟೇಬಲ್​ ಅಥವಾ ಫ್ರಿಜ್ಡ್​ ಮೇಲೆ ಇಡುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಇದು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ. ಹಾಗೆಯೇ, ಆರ್ಥಿಕವಾಗಿ ಕುಗ್ಗಿಸುತ್ತದೆ. ಹಾಗಾಗಿ ಈ ಗಿಡವನ್ನು ಸೂಕ್ತವಾದ ಪ್ರದೇಶದಲ್ಲಿ ಇಡುವುದರಿಂದ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ.

3. ಟ್ರೋಫಿಗಳು ಮತ್ತು ಪ್ರಶಸ್ತಿಗಳು

ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಜ್ ಮೇಲೆ ಟ್ರೋಫಿ ಅಥವಾ ಪ್ರಶಸ್ತಿಗಳನ್ನು ಇಡುವುದು ಒಳ್ಳೆಯದಲ್ಲ. ಫ್ರಿಜ್ಡ್​ ನೀರು ತತ್ವಕ್ಕೆ ಸಂಬಂಧಿಸಿದ್ದರೆ, ಟ್ರೋಫಿಗಳು ಲೋಹ ತತ್ವಕ್ಕೆ ಸೇರಿವೆ. ಈ ತತ್ವಗಳಿಂದ ಸಂಘರ್ಷ ಉಂಟಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ಜಗಳಗಳು, ಆರೋಗ್ಯದಲ್ಲಿ ಏರುಪೇರು, ಒತ್ತಡ, ಸಮೃದ್ಧಿಯ ಕೊರತೆ ಈ ರೀತಿಯಂತಹ ತೊಂದರೆಗಳನ್ನು ಅನುಭವಿಸಲು ಪ್ರಾರಂಭವಾಗುತ್ತದೆ. ಆದರಿಂದ ಅವುಗಳನ್ನು ಸೂಕ್ತವಾದ ಸ್ಥಳದಲ್ಲಿಡಿ.

4. ಅಕ್ವೇರಿಯಂ

ಇಂದಿನ ದಿನಗಳಲ್ಲಿ ಜನರು ಆದಷ್ಟು ಮನೆ ಸುಂದರವಾಗಿ ಕಾಣಬೇಕೆಂದು ಹಲವಾರು ರೀತಿಯ ವಸ್ತುಗಳನ್ನು ತಂದು ಮನೆಯಲ್ಲಿಡುತ್ತಾರೆ. ಅದರಲ್ಲಿ ಹೆಚ್ಚು ಆಕರ್ಷಕವಾಗುವಂತೆ ಅಕ್ವೇರಿಯಂನ್ನು ಫ್ರಿಜ್ಡ್​ ಮೇಲೆ ಇಟ್ಟಿರುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ಮೀನುಗಳು ಬೇಗ ಸಾಯುತ್ತವೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಇದು ನಿಮ್ಮ ಮನೆಗೆ ನಕರಾತ್ಮಕ ಪರಿಣಾಮ ಬೀರುತ್ತದೆ. ಆದರಿಂದ ಫ್ರಿಜ್ಡ್​ ಮೇಲೆ ಈ ವಸ್ತುವನ್ನು ಇಡಬೇಡಿ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net