ಟಿವಿ ಸೆಟ್ ಟಾಪ್ ಬಾಕ್ಸ್​​ನಿಂದ ವಿದ್ಯುತ್​​ ಶಾಕ್​​​ ತಗುಲಿ 4 ವರ್ಷದ ಬಾಲಕ ಮೃತ್ಯು

boy dies of electric shock from TV set top box in Maharashtra
Published on

ಮಹರಾಷ್ಟ್ರ: ಮನೆಯಲ್ಲಿ ಟೆಲಿವಿಷನ್ ಸೆಟ್ ಟಾಪ್ ಬಾಕ್ಸ್ ಮುಟ್ಟಿದಾಗ ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಹಿಂಗ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.

ಬಾಲಕ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದಾಗ, ಆಟವಾಡುತ್ತಾ ಹೋಗಿ ಸೆಟ್ ಟಾಪ್ ಬಾಕ್ಸ್ ಮುಟ್ಟಿದಾಗ ವಿದ್ಯುತ್ ಶಾಕ್ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಮಗು ಸತ್ತಿದೆ ಎಂದು ಘೋಷಿಸಿದ್ದಾರೆ.

ಹಿಂಗ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಖೈರೆ ಪನ್ನಾಸೆ ಪ್ರದೇಶದಲ್ಲಿ ಮಂಗಳವಾರ ಆಗಸ್ಟ್ 8ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net