More

    ಹೊಸಪೇಟೆಯಲ್ಲಿ ಚಿಕನ್ ಸೇವಿಸಿ 30ಕ್ಕೂ ಹೆಚ್ಚು ಹಾಸ್ಟೆಲ್​ ವಿದ್ಯಾರ್ಥಿನಿಯರು ಅಸ್ವಸ್ಥ

    ಹೊಸಪೇಟೆ: ಕಲುಷಿತ ಆಹಾರ ಸೇವನೆಯಿಂದ 30 ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ಗುರುವಾರ ಸಂಭವಿಸಿದೆ.

    ನಗರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿರುವ 148 ವಿದ್ಯಾರ್ಥಿಗಳ ಪೈಕಿ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ನಗರದ ಉಪ ವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಇನ್ನುಳಿದವರಿಗೆ ಹಾಸ್ಟೆಲ್​ನಲ್ಲೇ ಮಾತ್ರೆ, ಇಂಜಕ್ಷನ್ ನೀಡಿ ಉಪಚರಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ.

    ಇದನ್ನೂ ಓದಿ: ಟಾಪ್​ಲೆಸ್ ಆಗಿ ವಿಚಿತ್ರ ಭಂಗಿಯಲ್ಲಿ ಪೋಸ್​ ನೀಡಲು ಆದೇಶ: ಮಿಸ್​ ಯೂನಿವರ್ಸ್​ ಸ್ಪರ್ಧಿಗಳ ಗಂಭೀರ ಆರೋಪ

    ಘಟನೆ ವಿವರ

    ಕಳೆದ ರಾತ್ರಿ ಹಾಸ್ಟೆಲ್​ನಲ್ಲಿ ಚಿಕನ್​ ಊಟ ಬಡಿಸಲಾಗಿತ್ತು. ಒಟ್ಟು 148 ವಿದ್ಯಾರ್ಥಿನಿಯರಲ್ಲಿ 17 ಜನರು ಸಸ್ಯಹಾರ ಸೇವಿಸಿದ್ದು, ಇನ್ನುಳಿದವರು ಮಾಂಸಹಾರ ಸೇವಿಸಿದ್ದರು.

    ಚಿಕನ್ ಸೇವಿಸಿದವರಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆನಂತರ ವಾಂತಿ- ಬೇಧಿ ಕಾಣಿಸಿಕೊಂಡಿದೆ.‌ ತಕ್ಷಣ ವಿದ್ಯಾರ್ಥಿಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಜಿ.ಪಂ.ಸಿಇಒ ಸದಾಶಿವ ಪ್ರಭು, ಎಸಿ ನೋಂಗ್ಜಾಯ್ ಅಕ್ರ‌ಮ್ ಅಲಿ ಶಾ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

    ಬೇಕಾಬಿಟ್ಟಿ ಬೈಕ್​ ಚಾಲನೆ ಜತೆಗೆ ಅಪಾಯಕಾರಿ ಸಾಹಸ ಮಾಡ್ತಿದ್ದ ಮಿಸ್ಟರ್​ ಕ್ರೇಜಿ ಈಗ ಪೊಲೀಸರ ಅತಿಥಿ!

    27 ವರ್ಷದ ಯುವನಟಿಯನ್ನು ವರಿಸಲಿದ್ದಾರೆ 45ರ ವಿಶಾಲ್!? ಶೀಘ್ರದಲ್ಲೇ ನಡೆಯಲಿದೆಯಂತೆ ಅದ್ಧೂರಿ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts