ಲೋಕಸಭೆ, ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಬೇಕಿವೆ 30 ಲಕ್ಷ ಮತಯಂತ್ರಗಳು!

VV Pad
Published on

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಚುನಾವಣೆ ಆಯೋಗಕ್ಕೆ ಸುಮಾರು 30 ಲಕ್ಷ ವಿದ್ಯುನ್ಮಾನ ಮತದಾನ ಯಂತ್ರಗಳು (ಇವಿಎಂ) ಬೇಕಾಗುತ್ತವೆ. ಅಲ್ಲದೆ ತಯಾರಿಗಾಗಿ ಸುಮಾರು ಒಂದುವರೆ ವರ್ಷದ ಕಾಲಾವಧಿ ಅಗತ್ಯವಾಗುತ್ತದೆ ಎಂದು ಮೂಲಗಳು ಅಭಿಪ್ರಾಯ ಪಟ್ಟಿವೆ.

ಒಂದು ಇವಿಎಂನಲ್ಲಿ ಒಂದು ನಿಯಂತ್ರಣ ಟಕ, ಕನಿಷ್ಠ ಒಂದು ಬ್ಯಾಲೆಟ್​ ಟಕ ಮತ್ತು ಒಂದು ವಿವಿಪ್ಯಾಟ್​ (ವೋಟರ್​ ವೆರಿಯೇಬಲ್​ ಪೇಪರ್​ ಆಡಿಟ್​ ಟ್ರೇಯ್ಲ್) ಟಕ ಇರುತ್ತವೆ. ಏಕ&ಕಾಲದ ಚುನಾವಣೆ ನಡೆಸಲು ಸುಮಾರು 30 ಲಕ್ಷ ನಿಯಂತ್ರಣ ಟಕಗಳು, 43 ಲಕ್ಷ ಬ್ಯಾಲೆಟ್​ ಟಕಗಳು ಮತ್ತು 32 ಲಕ್ಷ ವಿವಿಪ್ಯಾಟ್​ಗಳ ಅಗತ್ಯ ಬೀಳುತ್ತದೆ ಎಂದು ಮೂಲಗಳು ಅಂದಾಜು ಮಾಡಿವೆ.

ಯಾವುದೇ ದೋಷ ಅಥವಾ ಹಾನಿಯಾದಲ್ಲಿ ಅವುಗಳ ಸ್ಥಾನದಲ್ಲಿ ಬಳಸಲು ಬೇಕಾಗುವ ಮೀಸಲು ಟಕಗಳನ್ನು ಗಣನೆಗೆ ತೆಗೆದುಕೊಂಡಾಗ ಇಷ್ಟೊಂದು ಟಕಗಳು ಬೇಕಾಗುತ್ತವೆ. ಸದ್ಯಕ್ಕೆ ಏಕಕಾಲಕ್ಕೆ ಚುನಾವಣೆ ನಡೆಸಲು 35 ಲಕ್ಷ ಮತದಾನ ಟಕಗಳ (ವೋಟಿಂಗ್​ ಯುನಿಟ್​) ನಿಯಂತ್ರಣ ಟಕ, ಬ್ಯಾಲೆಟ್​ ಟಕ ಮತ್ತು ವಿವಿಪ್ಯಾಟ್​ ಟಕ ಕೊರತೆಯಿದೆ ಎಂದು ಮೂಲಗಳು ವಿವರಿಸಿವೆ. ಏಕಕಾಲದ ಚುನಾವಣೆ ಪ್ರಕ್ರಿಯೆ ಕುರಿತ ಚರ್ಚೆ ಬಿರುಸು ಪಡೆಯುತ್ತಿರುವುದರ ನಡುವೆ ಈ ಲೆಕ್ಕಾಚಾರಗಳನ್ನು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net