ಶ್ರೀಲಂಕಾ: ಸಮುದ್ರದಲ್ಲಿ ಬೇಟೆಯಾಡಿದ ಆರೋಪದಡಿ 27 ಭಾರತೀಯ ಮೀನುಗಾರರ ಬಂಧನ!

Untitled design - 2023-10-16T065422.650
Published on

ಕೊಲಂಬೊ: ಶ್ರೀಲಂಕಾದ ಪ್ರಾದೇಶಿಕ ಸಮುದ್ರದಲ್ಲಿ ಮೀನು ಹಿಡಿಯಲು ಬೇಟೆಯಾಡಿದ ಆರೋಪದಡಿ 27 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ದ್ವೀಪ ರಾಷ್ಟ್ರದ ನೌಕಾಪಡೆ ಭಾನುವಾರ ಮಾಹಿತಿ ನೀಡಿದೆ.

ಮೀನುಗಾರರನ್ನು ಈಶಾನ್ಯ ಮನ್ನಾರ್ ಕರಾವಳಿಯಲ್ಲಿ ಮತ್ತು ಉತ್ತರದಲ್ಲಿ ಡೆಲ್ಫ್ ಮತ್ತು ಕಚ್ಚತೀವು ದ್ವೀಪಗಳಲ್ಲಿ ಬಂಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಶ್ರೀಲಂಕಾ ನೌಕಾಪಡೆಯು ಎರಡು ಭಾರತೀಯ ಬೋಟ್​ಗಳನ್ನು ಹೊಂದಿದ್ದು, ಅದು 15 ಭಾರತೀಯ ಮೀನುಗಾರರೊಂದಿಗೆ ಮನ್ನಾರ್‌ನ ದ್ವೀಪದ ನೀರಿನಲ್ಲಿ ಉಳಿದಿದೆ. ಆದ್ರೆ, 12 ಮೀನುಗಾರರೊಂದಿಗೆ ಮೂರು ಭಾರತೀಯ ಟ್ರಾಲರ್‌ಗಳನ್ನು (ಮೀನು ಸಂಗ್ರಹಿಸುವ ಬೋಟ್​) ಡೆಲ್ಫ್ಟ್ ಮತ್ತು ಕಚ್ಚತೀವು ದ್ವೀಪಗಳ ಬಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಮೀನುಗಾರರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ, 17 ಭಾರತೀಯ ಮೀನುಗಾರರನ್ನು ಜಾಫ್ನಾ ಕಾಕರಥಿವು ದ್ವೀಪದ ಕರಾವಳಿಯಲ್ಲಿ ಬಂಧಿಸಲಾಗಿತ್ತು.

ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ಸದ್ಯ ವಿವಾದಾಸ್ಪದವಾಗಿದೆ. ಲಂಕಾ ನೌಕಾಪಡೆಯ ಸಿಬ್ಬಂದಿ ಪಾಲ್ಕ್​ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದರು ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಲ್ಕ್​ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ನೀರಿನ ಕಿರಿದಾದ ಪಟ್ಟಿಯಾಗಿದ್ದು, ಎರಡೂ ದೇಶಗಳ ಮೀನುಗಾರರಿಗೆ ಇದು ಶ್ರೀಮಂತ ಮೀನುಗಾರಿಕೆ ಕೇಂದ್ರವಾಗಿದೆ. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಅಧಿಕಾರಿಗಳು ಬಂಧಿಸಿದ ಸಂದರ್ಭಗಳು ನಿಯತಕಾಲಿಕವಾಗಿ ನಡೆದಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net