More

    ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಕರ್ನಾಟಕದ ಪೆನ್; 20 ಅಡಿ ಉದ್ದ, 10 ವರ್ಷಗಳ ಹಿಂದೆ ತಯಾರಿ

    ಸಾಗರ: ಕರ್ನಾಟಕದ ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಸಿಕ್ಕಿದೆ.

    ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್​ವೇರ್ ಮತ್ತು ಜೈಗಣೇಶ್ ವುಡ್​ವರ್ಕ್ ಮಾಲೀಕ, ಕುಶಲಕರ್ಮಿಯೂ ಆಗಿರುವ ಕೃಷ್ಣಮೂರ್ತಿ ಆಚಾರ್ ಹತ್ತು ವರ್ಷಗಳ ಹಿಂದೆ ಈ ಪೆನ್ ತಯಾರಿಸಿದ್ದರು.

    ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ಜಾತ್ರೆ; ಮಲೆಮಹದೇಶ್ವರ ದೇವಸ್ಥಾನದಲ್ಲಿ ಮೂರೇ ದಿನದಲ್ಲಿ 1 ಕೋಟಿ ರೂಪಾಯಿಗೂ ಅಧಿಕ ಆದಾಯ!

    ಇಪ್ಪತ್ತು ಅಡಿ ಉದ್ದದ ಲೇಖನಿಗೆ ನವದೆಹಲಿಯಲ್ಲಿ ಶನಿವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಲೇಖನಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

    ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಕರ್ನಾಟಕದ ಪೆನ್; 20 ಅಡಿ ಉದ್ದ, 10 ವರ್ಷಗಳ ಹಿಂದೆ ತಯಾರಿ

    ಕೃಷ್ಣಮೂರ್ತಿ ಆಚಾರ್ ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ಈ ಬೃಹತ್ ಪೆನ್ ತಯಾರಿಸಿದ್ದಾರೆ. ಹೈಬ್ರೀಡ್ ಅಕೇಶಿಯಾ ಕಟ್ಟಿಗೆಯನ್ನು ಉಪಯೋಗಿಸಿ ಸುಮಾರು 15 ದಿನಗಳ ನಿರಂತರ ಶ್ರಮದಿಂದ ಸಿದ್ಧಪಡಿಸಿದ್ದಾರೆ.

    ಈ ವಿಶೇಷವಾದ ಪೆನ್ನನ್ನು ಗಿನ್ನೆಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಪೆನ್​ಗೆ ಸ್ಥಾನ ಸಿಕ್ಕಿದೆ.

    ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts