More

    ಪರಶುರಾಮನ 33 ಅಡಿ ಎತ್ತರದ ಪ್ರತಿಮೆ ಬೆಳಗಾಗುವುದರೊಳಗೆ ನಾಪತ್ತೆ!

    ಉಡುಪಿ: ಬಿಜೆಪಿ ಸರ್ಕಾರ 8 ತಿಂಗಳ ಹಿಂದೆ ಉದ್ಘಾಟನೆ ಮಾಡಿದ್ದ ಪರಶುರಾಮ ಥೀಮ್​ ಪಾರ್ಕ್​ನ 33 ಅಡಿ ಎತ್ತರದ ಪರಶುರಾಮನ ಮೂರ್ತಿ ರಾತ್ರೋರಾತ್ರಿ ನಾಪತ್ತೆ ಆಗಿದೆ. ಪ್ರತಿಮೆ ಕಳಪೆಯಾಗಿತ್ತು ಎಂಬ ಆರೋಪ ಕೇಳಿ ಬಂದ ಕೆಲವೇ ದಿನಗಳಲ್ಲಿ ಹೀಗಾಗಿರುವುದು ನಿರ್ಮಾಣದ ಗುಣಮಟ್ಟದ ಕುರಿತ ಅನುಮಾನವನ್ನು ಬಲವಾಗಿಸಿದೆ.

    ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕಲ್ಲು ಬೆಟ್ಟದ ಮೇಲಿನ ಈ 33 ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಇದನ್ನೊಳಗೊಂಡ ಪರಶುರಾಮ ಥೀಮ್ ಪಾರ್ಕ್ ಇದೇ ಜ. 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡಿತ್ತು.

    ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಉದ್ಘಾಟನೆಯಾಗಿದ್ದ ಈ ಥೀಮ್​ ಪಾರ್ಕ್ ಶಾಸಕ ಸುನೀಲ್​ಕುಮಾರ್​ಗೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರತಿಮೆ ಗುಣಮಟ್ಟದ ಕುರಿತು ಆರೋಪ ಕೇಳಿಬಂದಿತ್ತು.

    ಇದನ್ನೂ ಓದಿ: ನಾನೂ ಪರಶುರಾಮನ ಭಕ್ತ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ; ಕಾರ್ಕಳದಲ್ಲಿ ಥೀಂ ಪಾರ್ಕ್ ಉದ್ಘಾಟನೆ

    ಕಂಚಿನದ್ದು ಎನ್ನಲಾದ ಪ್ರತಿಮೆಯನ್ನು ಗ್ರಾಸ್​​ ಫೈಬರ್ ಹಾಗೂ ಪಿಒಪಿಯಿಂದ ನಿರ್ಮಾಣ ಮಾಡಲಾಗಿತ್ತು ಎಂಬ ಆರೋಪ ಬಂದಿತ್ತು. ಈ ವಿಚಾರ ತೀವ್ರ ಚರ್ಚೆಗೆ ಒಳಗಾಗಿದ್ದು, ಪರ-ವಿರೋಧ ಟೀಕೆಗೆ ವಸ್ತುವಾಗಿರುವ ನಡುವೆಯೇ ನಿನ್ನೆ ರಾತ್ರಿಯೇ ಈ ಪ್ರತಿಮೆ ನಾಪತ್ತೆ ಆಗಿದೆ. ಇದೀಗ ಈ ವಿಚಾರ ಭಾರಿ ಚರ್ಚೆಗೀಡಾಗಿದೆ.

    ‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!

    ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ ‘ರಾಮಾಯಣದ ಹನುಮಂತ’; ಎಲ್ಲಿ, ಯಾರ ವಿರುದ್ಧ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts