More

    ನಾನೂ ಪರಶುರಾಮನ ಭಕ್ತ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ; ಕಾರ್ಕಳದಲ್ಲಿ ಥೀಂ ಪಾರ್ಕ್ ಉದ್ಘಾಟನೆ

    ಕಾರ್ಕಳ (ಉಡುಪಿ): ನಾನು ಪರಶುರಾಮ ಭಕ್ತ. ಪರಶುರಾಮನ ತಾಯಿ ರೇಣುಕಾದೇವಿ ನಮ್ಮ ಮನೆ ದೇವರು. ರೇಣುಕಾ ದೇವಿಯನ್ನು ನೆನೆಯುವಾಗ ಪರಶುರಾಮನನ್ನೂ ಸ್ಮರಿಸುತ್ತೇನೆ. ಪರಶುರಾಮನ ವಿಗ್ರಹದಿಂದಾಗಿ ಬೈಲೂರು ಪುಣ್ಯಭೂಮಿಯಾಗಿ ಬದಲಾಗಲಿದೆ. ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಶುಕ್ರವಾರ ತಾಲೂಕಿನ ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ನಿರ್ವಿುಸಲಾದ 33 ಅಡಿ ಎತ್ತರದ ಪರಶುರಾಮ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಹಾಗೂ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 1.5 ಲಕ್ಷ ಕೋಟಿ ರೂ. ಹೂಡಿಕೆ ಕರಾವಳಿ ಭಾಗಕ್ಕೆ ಬಂದಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಸಲಾಗುವುದು ಎಂದೂ ತಿಳಿಸಿದರು. ಸಹಸ್ರ ಶಂಖವಾದಕರಿಂದ ಏಕಕಾಲದಲ್ಲಿ ಶಂಖನಾದ ಮೊಳಗಿಸುವುದರೊಂದಿಗೆ ಥೀಂ ಪಾರ್ಕ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಥೀಂ ಪಾರ್ಕ್ ರೂವಾರಿ- ಸಚಿವ ಸುನೀಲ್ ಕುಮಾರ್ ಸಿಎಂ ಬೊಮ್ಮಾಯಿ ಅವರಿಗೆ ಪರಶುರಾಮ ಪ್ರತಿಮೆ ನೀಡಿ ಗೌರವಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಎಸ್.ಅಂಗಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂತಾರ ಖ್ಯಾತಿಯ ನಟ- ನಿರ್ದೇಶಕ ರಿಷಬ್ ಶೆಟ್ಟಿ ಉಪಸ್ಥಿತರಿದ್ದರು.

    ಕಾರ್ಕಳವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ದೇಶದ ಜನರನ್ನು ಆಕರ್ಷಿಸಬೇಕು ಎನ್ನುವುದು ಆಶಯ. ಸ್ವರ್ಣ ಕಾರ್ಕಳ ನಿರ್ವಣದ ಭಾಗವಾಗಿ ಪರಶುರಾಮ ಥೀಂ ಪಾರ್ಕ್ ನಿರ್ವಣವಾಗಿದೆ. ಇದು ಮೊದಲ ಹಂತದ ಉದ್ಘಾಟನೆ. 2-3 ವರ್ಷದ ಅವಧಿಯಲ್ಲಿ ಇನ್ನಷ್ಟು ಯೋಜನೆಗಳು ಇಲ್ಲಿಗೆ ಬರಲಿವೆ.

    | ವಿ.ಸುನೀಲ್ ಕುಮಾರ್ ಸಚಿವ

    ವಿಜಯನಗರ ಮೌಲ್ಯಗಳೊಂದಿಗೆ ಸಮೃದ್ಧ ನವ ಕರ್ನಾಟಕ ನಿರ್ಮಾಣ

    ನಾನೂ ಪರಶುರಾಮನ ಭಕ್ತ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ; ಕಾರ್ಕಳದಲ್ಲಿ ಥೀಂ ಪಾರ್ಕ್ ಉದ್ಘಾಟನೆ
    ವಿಶ್ವವಿಖ್ಯಾತ ಹಂಪಿಯಲ್ಲಿ ಶುಕ್ರವಾರ ಸಂಜೆ ‘ಹಂಪಿ ಉತ್ಸವ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಸುಂಕಮ್ಮ ಇದ್ದರು

    ಹೊಸಪೇಟೆ: ಮಹೋನ್ನತವಾದ ವಿಜಯನಗರ ಸಾಮ್ರಾಜ್ಯದ ಮೌಲ್ಯಗಳ ಪ್ರೇರಣೆಯೊಂದಿಗೆ ಅತ್ಯಂತ ಸಮೃದ್ಧ, ಸುರಕ್ಷತೆಯ ನವ ಕರ್ನಾಟಕ ನಿರ್ವಣಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಕನ್ನಡ-ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಸಂಜೆ ಹಂಪಿಯ ಗಾಯತ್ರಿ ಪೀಠದ ಮುಖ್ಯವೇದಿಕೆಯಲ್ಲಿ ‘ಹಂಪಿ ಉತ್ಸವ’ ಉದ್ಘಾಟಿಸಿ ಮಾತನಾಡಿದರು. ಹಂಪಿಯ ಒಂದೊಂದು ಕಲ್ಲು ಕೂಡ ಗತ ವೈಭವದ ಕಥೆ ಹೇಳುತ್ತದೆ. ಹಂಪಿಗೆ ಆಗಮಿಸುವ ಯಾತ್ರಿಕರ ಅನುಕೂಲಕ್ಕಾಗಿ ಎಎಸ್​ಐನಿಂದ ಅನುಮತಿ ದೊರಕಿಸಿಕೊಡಲಾಗುವುದು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 120 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೋಪ್, ಯಾತ್ರಿಕರಿಗೆ ವಸತಿ, ಸುತ್ತಮುತ್ತಲಿನ ರಸ್ತೆಗಳ ನಿರ್ವಣಕ್ಕಾಗಿ ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದರು.

    ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಮತ್ತು ದಕ್ಷಿಣದಲ್ಲಿ ಮೈಸೂರನ್ನು ಸರ್ಕ್ಯೂಟ್​ಗಳನ್ನಾಗಿಸಲು ಉದ್ದೇಶಿಸಲಾಗಿದೆ. ಪ್ರವಾಸಿಗರು ಒಂದು ಕ್ಲಸ್ಟರ್​ನ ಟಿಕೆಟ್ ಖರೀದಿಸಿದರೆ ಸಾಕು. ಆ ಭಾಗದ ಆಯ್ದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾರಿಗೆ, ವಸತಿಗೆ ಹೋಟೆಲ್ ಸೌಲಭ್ಯವನ್ನು ಕಲ್ಪಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

    ಈ ಪಾವನ ಭೂಮಿಯ ಪ್ರೇರಣೆಯಿಂದ ನವ ಕರ್ನಾಟಕ ನಿರ್ವಣಕ್ಕೆ ಸಂಕಲ್ಪ ಮಾಡಿದ್ದೇವೆ. ನಾಡಿನ ಯುವ ಜನರಿಗೆ ದುಡಿಮೆ ಒದಗಿಸಿ, ಜನರ ಆದಾಯ ಹೆಚ್ಚಿಸಬೇಕು. ದುಡಿಯುವ ವರ್ಗಕ್ಕೆ ಪೋ›ತ್ಸಾಹ ನೀಡಬೇಕು. ರಾಜ್ಯದಲ್ಲಿ ಅನೇಕರು ಸರ್ಕಾರ ನಡೆಸಿದ್ದಾರೆ. ಹಿಂದೆ ಅನೇಕರು ಆಡಳಿತ ನಡೆಸಿದ್ದು, ನೀರಾವರಿ, ರಸ್ತೆ, ಕೃಷಿ ಮತ್ತಿತರೆ ಅಭಿವೃದ್ಧಿಗೆ ಒತ್ತು ನೀಡಿದ್ದರೂ, ಬದುಕು ಕಟ್ಟಿಕೊಳ್ಳುವ ದುಡಿಮೆಗೆ ಒತ್ತು ಆದ್ಯತೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸಬ್ ಕಾ ಸಾತ್- ಸಬ್ ಕಾ ವಿಕಾಸ್​ದೊಂದಿಗೆ ದುಡಿಯುವ ವರ್ಗಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ ಇದ್ದರು.

    ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್​ ಯುವ ಮುಖಂಡ ನಿಧನ

    ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts