More

    ಪ್ಲೇಆಫ್​ ಅವಕಾಶ ವೃದ್ಧಿಸುವ ವಿಶ್ವಾಸದಲ್ಲಿ ಲಖನೌ: ಇಂದು ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಾಡು ಇಲ್ಲವೇ ಮಡಿ ಕಾದಾಟ

    ನವದೆಹಲಿ: ಚುಟುಕು ಕ್ರಿಕೆಟ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಫ್ರಾಂಚೈಸಿ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿರುವ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್-17ರಲ್ಲಿ ಪ್ಲೇಆಫ್ ಆಸೆ ಜೀವಂತವಿರಿಸಿಕೊಂಡಿದೆ. ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಡಲಿದೆ. ಉಭಯ ತಂಡಗಳಿಗೆ ‘ಡು ಆರ್ ಡೈ’ ಒತ್ತಡದಲ್ಲಿ ಕಣಕ್ಕಿಳಿಯಲಿವೆ.

    ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 10 ವಿಕೆಟ್‌ಗಳ ಸೋಲಿನ ಬಳಿಕ ಸಾರ್ವಜನಿಕವಾಗಿ ಮುಜುಗರ ಅನುಭವಿಸಿರುವ ರಾಹುಲ್‌ಗೆ ಉಳಿದ 2 ಲೀಗ್ ಪಂದ್ಯಗಳು ಪ್ರತಿಷ್ಠೆ ಎನಿಸಿದೆ. ಲಖನೌ ಸೂಪರ್ ಜೈಂಟ್ಸ್ ,ಆಡಿರುವ 12 ಪಂದ್ಯಗಳಲ್ಲಿ 6 ಜಯ, 6 ಸೋಲಿನೊಂದಿಗೆ 12 ಅಂಕ ಕಲೆಹಾಕಿದೆ. ಇನ್ನು ಕ್ಷೀಣ ಆಸೆ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಗೆಲುವು ಎದುರು ನೋಡುತ್ತಿದೆ. ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲಿನೊಂದಿಗೆ 12 ಅಂಕ ಹೊಂದಿದೆ. ಆದರೆ ಕಳಪೆ ರನ್‌ರೇಟ್ ಹೊಂದಿರುವುದು ಪ್ಲೇಆ್ ಆಸೆಗೆ ಹಿನ್ನಡೆ ತಂದಿದೆ. ಆರ್‌ಸಿಬಿ ವಿರುದ್ಧ 47 ರನ್‌ಗಳ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಾಯಂ ನಾಯಕ ರಿಷಭ್ ಪಂತ್ ಆಗಮನ ಬಲ ತುಂಬುವ ನಿರೀಕ್ಷೆ ಇದೆ. ನಿಧಾನಗತಿಯ ಓವರ್‌ರೇಟ್‌ಗಾಗಿ ಪಂತ್ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಿದ್ದರು.

    ಮುಖಾಮುಖಿ: 4
    ಡೆಲ್ಲಿ: 1
    ಲಖನೌ: 3
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts