ಎಲ್‌ಎಸ್‌ಜಿ ನಾಯಕತ್ವ ತೊರೆಯುವರೇ ರಾಹುಲ್ ?: ಲಖನೌ ಎದುರು ಗೆದ್ದರೂ ಡೆಲ್ಲಿಗಿಲ್ಲ ಪ್ಲೇಆಫ್​ ಚಾನ್ಸ್!

ನವದೆಹಲಿ: ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಸಾರ್ವಜನಿಕ ವಾಗ್ದಂಡನೆ ನಂತರ ರಾಹುಲ್ ಎಲ್‌ಎಸ್‌ಜಿ ನಾಯಕನಾಗಿ ಮುಂದುವರಿಯುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ರಾಹುಲ್ ನಾಯಕತ್ವದಿಂದ ಕೆಳಗಿಳಿಯಬಹುದು ಅಥವಾ ಉಳಿದ ಎರಡು ಲೀಗ್ ಪಂದ್ಯಗಳಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎನ್ನಲಾಗುತ್ತಿದೆ. ಇವೆಲ್ಲಕ್ಕೂ ತನ್ನ ಬ್ಯಾಟ್‌ನಿಂದ ಉತ್ತರಿಸುವುದರ ಜತೆಗೆ ತಂಡವನ್ನು ಪ್ಲೇಆಫ್​ಗೇರಿಸುವ ಸವಾಲು ರಾಹುಲ್ ಮುಂದಿದೆ. ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ರಾಹುಲ್‌ಗೆ ಕಠಿಣ ಪರೀಕ್ಷೆ ಇದಾಗಿದೆ.

ಲಖನೌ ಪ್ಲೇಆಫ್ ಹಾದಿ: ಲಖನೌ ತಂಡ ಸದ್ಯ 12 ಅಂಕ ಹೊಂದಿದ್ದು ಗರಿಷ್ಠ 16 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಜತೆಗೆ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ. ಏಕೆಂದರೆ ಸನ್‌ರೈಸರ್ಸ್‌ ಹಾಗೂ ಸಿಎಸ್‌ಕೆ ತಂಡಗಳು ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸಿವೆ ಜತೆಗೆ 16 ಅಂಕ ಸಂಪಾದಿಸುವ ಅವಕಾಶ ಹೊಂದಿವೆ. ಈ ಎರಡೂ ತಂಡಗಳು 16 ಅಂಕ ಕಲೆಹಾಕಿದರೆ ಲಖನೌ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ಲೇಆ್ ರೇಸ್‌ನಿಂದ ಹೊರಗುಳಿಯಲಿದೆ. ಪ್ರಸ್ತುತ 16 ಅಂಕ ಹೊಂದಿರುವ ರಾಜಸ್ಥಾನ ರಾಯಲ್ಸ್ ಕೊನೇ 2 ಲೀಗ್ ಪಂದ್ಯ ಸೋತರೂ ಲಖನೌ ತಂಡ ಅಗ್ರ-4ರಲ್ಲಿ ಸ್ಥಾನ ಪಡೆಯುವುದು ಅನುಮಾನ.

ಗೆದ್ದರೂ ಡೆಲ್ಲಿಗಿಲ್ಲ ಚಾನ್ಸ್!: ಆರ್‌ಸಿಬಿ ವಿರುದ್ಧದ 47 ರನ್‌ಗಳ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ರನ್‌ರೇಟ್ -0.482ಕ್ಕೆ ಕುಸಿತ ಕಂಡಿದೆ. ಇದು ಸಿಎಸ್‌ಕೆ, ಸನ್‌ರೈಸರ್ಸ್‌ ಹಾಗೂ ಆರ್‌ಸಿಬಿಗಿಂತ ಕಳಪೆ ಎನಿಸಿದೆ. ಗರಿಷ್ಠ 14 ಅಂಕ ಕಲೆಹಾಕಿದರೂ ಡೆಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ವಿರಳವಾಗಿದೆ. ಸನ್‌ರೈಸರ್ಸ್‌ ತಂಡ ಕೊನೇ 2 ಲೀಗ್ ಪಂದ್ಯಗಳಲ್ಲಿ ದೊಡ್ಡ ಅಂತರ ಸೋಲು ಹಾಗೂ ಆರ್‌ಸಿಬಿ ತಂಡವನ್ನು ಸಿಎಸ್‌ಕೆ ಮಣಿಸಬೇಕು. ಜತೆಗೆ ಲಖನೌ ತಂಡ 2 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು, ರನ್‌ರೇಟ್‌ನಲ್ಲಿ ಡೆಲ್ಲಿಗಿಂತ ಹಿನ್ನಡೆ ಕಂಡರೆ ಪಂತ್ ಪಡೆಗೆ ಅವಕಾಶವಿದೆ. ಆದರೆ ಸನ್‌ರೈಸರ್ಸ್‌ ತಂಡ ಉಳಿದ 2 ಪಂದ್ಯಗಳಲ್ಲಿ ಒಟ್ಟು 150 ರನ್ ಅಂತರದಲ್ಲಿ ಸೋತರೆ, ಲಖನೌ ತಂಡವನ್ನು ಡೆಲ್ಲಿ 64 ರನ್‌ಗಳಿಂದ ಮಣಿಸಿದರೆ ಮಾತ್ರ ಇದು ಸಾಧ್ಯ.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…