More

    ‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!

    ನವದೆಹಲಿ: ದೇಶದ ಕುರಿತ ಮನಸ್ಥಿತಿಯನ್ನೇ ಬದಲಿಸುತ್ತೇನೆ ಎಂದು ಹೊರಟ ಮಿಸ್​ ಯೂನಿವರ್ಸ್ ಪ್ರತಿಸ್ಪರ್ಧಿಯೊಬ್ಬಳು ಇದೀಗ ಆರಂಭದಲ್ಲೇ ಹಿನ್ನಡೆ ಅನುಭವಿಸುವಂತಾಗಿದೆ. ಮಿಸ್​ ಯೂನಿವರ್ಸ್ ಸ್ಪರ್ಧಿ ಆಗಿರುವ ಎರಿಕ ರಾಬಿನ್ ಈ ಫಜೀತಿಗೆ ಸಿಲುಕಿದ್ದಾರೆ.

    ಪಾಕಿಸ್ತಾನದಿಂದ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆಯ್ಕೆ ಆಗಿರುವ ಎರಿಕ ರಾಬಿನ್, ನವೆಂಬರ್​ನಲ್ಲಿ ಸಾಲ್ವಡರ್​ನಲ್ಲಿ ನಡೆಯಲಿರುವ ಮಿಸ್​ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಕ್ ಪ್ರತಿನಿಧಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಆಯ್ಕೆಯಾಗಿಎ ಮಿಸ್​ ಯೂನಿವರ್ಸ್​ ಪಾಕಿಸ್ತಾನ್​ನಲ್ಲಿ ಸ್ಪರ್ಧಿಸಿದ್ದ ಈಕೆ ಅಂತಿಮ ಸುತ್ತಿನಲ್ಲಿ ಇತರ ನಾಲ್ವರೊಂದಿಗೆ ಪೈಪೋಟಿ ನಡೆಸಿ ಆಯ್ಕೆ ಆಗಿದ್ದಾರೆ.

    ಈ ಮೂಲಕ ಮಿಸ್ ಯೂನಿವರ್ಸ್​ನ 72 ವರ್ಷದ ಇತಿಹಾಸದಲ್ಲಿ ಪಾಕಿಸ್ತಾನ ಪ್ರಥಮ ಬಾರಿಗೆ ಸ್ಪರ್ಧಿಯೊಬ್ಬರನ್ನು ಮಿಸ್​ ಯೂನಿವರ್ಸ್​ಗೆ ಕಳುಹಿಸಿದಂತಾಗಿದೆ. ತನ್ನ ಆಯ್ಕೆ ಅಂತಿಮಗೊಂಡ ಸಂದರ್ಭದಲ್ಲಿ ಸುದ್ದಿಗಾರರು ದೇಶದ ಬಗ್ಗೆ ಏನು ಮಾಡಲಿದ್ದೀರಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಎರಿಕ, ಪಾಕಿಸ್ತಾನ ಹಿಂದುಳಿದ ದೇಶ ಎಂಬ ಮನಸ್ಥಿತಿಯನ್ನು ನಾನು ಬದಲಿಸುತ್ತೇನೆ ಎಂಬುದಾಗಿ ಹೇಳಿದ್ದರು.

    ಇದನ್ನೂ ಓದಿ: ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ ‘ರಾಮಾಯಣದ ಹನುಮಂತ’; ಎಲ್ಲಿ, ಯಾರ ವಿರುದ್ಧ?

    ಆದರೆ ಅದಕ್ಕೂ ಮುಂಚೆಯೇ ಈ ಆಯ್ಕೆ ಬಗ್ಗೆ ಪಾಕ್ ಆಕ್ಷೇಪ ವ್ಯಕ್ತಪಡಿಸಿದೆ. ಪಾಕ್​ನ ಹಂಗಾಮಿ ಪ್ರಧಾಣಿ ಅನ್ವರ್ ಉಲ್ ಹಕ್ ಕಾಕರ್, ಮಿಸ್​ ಯೂನಿವರ್ಸ್ ಪಾಕಿಸ್ತಾನ್ ಸ್ಪರ್ಧೆಯ ಆಯೋಜಕರನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ದೇಶದ ಅನುಮತಿ ಇರದೆ ದೇಶದ ಹೆಸರಿನಲ್ಲಿ ಸ್ಪರ್ಧೆಗೆ ಕಳುಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಮ್ಮ ಸರ್ಕಾರದಿಂದ ಅಥವಾ ಸರ್ಕಾರದ ಯಾವುದೇ ಸಂಸ್ಥೆಯಿಂದ ಈ ಥರ ಯಾವುದೇ ಸ್ಪರ್ಧಿಯನ್ನು ಕಳಿಸುತ್ತಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಹೋಟೆಲ್​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200 ತಿಗಣೆ ಕಡಿತ!; ರೂಮ್ ಬಾಡಿಗೆ 17 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts