More

    ವೃಕ್ಷೋದ್ಯಾನಕ್ಕೆ ನಿತ್ಯವೂ ಬೀಗ!

    ಕಿರುವಾರ ಎಸ್​.ಸುದರ್ಶನ್​ ಕೋಲಾರ
    ನಗರದಿಂದ ಐದು ಕಿಮೀ ದೂರದಲ್ಲಿ ನಿರ್ಮಿಸಿರುವ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಸದಾ ಬೀಗ ಹಾಕಿರುವುದರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲದಂತಾಗಿದೆ.

    ಅರಣ್ಯ ಇಲಾಖೆಯ ವಿಶೇಷ ಯೋಜನೆಯಡಿ 2017-18ನೇ ಸಾಲಿನಲ್ಲಿ 20 ಎಕರೆಗೂ ಅಧಿಕ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಉದ್ಯಾನದ ಉದ್ಘಾಟನೆ ಬಳಿಕ ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲ. ಜತೆಗೆ, ನಗರದಿಂದ ಬಂಗಾರಪೇಟೆ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಜಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ವಿಳಾಸ ಸಿಗದಂತಹ ಮೂಲೆಯಲ್ಲಿದೆ ಎಂಬ ಆರೋಪವೂ ಇದೆ.

    ಒಣಗಿದ ಗಿಡ, ಹಾಳಾದ ಪರಿಕರ
    ವೃೋದ್ಯಾನದಲ್ಲಿ ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ ಸಾಹಸ ಕ್ರೀಡೆಗಳು, ತೆರೆದ ವ್ಯಾಯಾಮ ಶಾಲೆ, ಸೈನ್ಸ್​ ಕಾಪ್​, ಪಗಳ, ಪ್ರಾಣಿಗಳ ಕುರಿತು ಮಾಹಿತಿ ಲಕ, ಕುಟೀರ, ಧ್ಯಾನ ಕೇಂದ್ರ ನಿರ್ಮಾಣ ಮಾಡಲಾಗಿದೆ. ಮಕ್ಕಳು ಆಟ ಆಡಲು ಜಾರು ಬಂಡಿ, ತಿರುಗುವ ಚಕ್ರ, ತೂಗುಯ್ಯಾಲೆ, ಇಳಿಜಾರು ಬಂಡೆ, ಬೆಟ್ಟ ಹತ್ತುವ ತಿಕೃತಿ, ಉಯ್ಯಾಲೆ, ಕುದುರೆ ಮೇಲೆ ಕುಳಿತು ಆಡುವ ಆಟಿಕೆ ಸೇರಿ ಅನೇಕ ಸಾಮಗ್ರಿ ಅಳವಡಿಸಲಾಗಿದೆ. ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ಪ್ರಾಣಿ ಪಕ್ಷಿಗಳ ಹೆಸರು, ಜೀವನ ಕ್ರಮ ಇನ್ನಿತರ ವಿಷಯ ತಿಳಿಸುವ ಮಾಹಿತಿ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಆದರೆ, ಸದಾ ಬಾಗಿಲು ಹಾಕಿರುವುದರಿಂದ ಸಮರ್ಪಕ ನಿರ್ವಹಣೆಯಿಲ್ಲದೆ ವ್ಯಾಯಾಮ ಪರಿಕರಗಳು ಹಾನಿಯಾಗಿವೆ. ಜತೆಗೆ ನೀರು ಹರಿಸದಿರುವುದರಿಂದ ಗಿಡಗಳಿಗೆ ಒಣಗುತ್ತಿವೆ.

    ಮಾಹಿತಿಯೇ ಇಲ್ಲ
    ಉದ್ಯಾನವು ನಗರದಿಂದ ದೂರವಿದೆ, ವ್ಯಾಪಕ ಪ್ರಚಾರ ಮಾಡಿದ್ದರೆ ಹೆಚ್ಚು ಜನ ಭೇಟಿ ನೀಡುತ್ತಿದ್ದರು. ಆದರೆ, ಅಪರೂಪಕ್ಕೆ ಭೇಟಿ ನೀಡಿದರೂ ಉದ್ಯಾವನದ ಮುಖ್ಯದ್ವಾರದ ಗೇಟ್​ಗೆ ಬೀಗ ಹಾಕಲಾಗಿರುತ್ತದೆ. ಇದರಿಂದಾಗಿ ಕೋಲಾರದಲ್ಲಿ ಸಾಲುಮರದ ತಿಮ್ಮಕ್ಕ ಪಾರ್ಕ್​ ಇದೆ ಎಂಬುದೇ ಯಾರಿಗೂ ತಿಳಿದಿಲ್ಲ.

    ಬಳಕೆಗಿಲ್ಲ ಶೌಚಗೃಹ
    ಪಾರ್ಕ್​ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ನಿರ್ಮಿಸಲಾಗಿದೆ. ಆದರೆ, ಯಾರಿಗೂ ಭೇಟಿ ನೀಡಲು ಅವಕಾಶ ಇಲ್ಲದಿರುವುದರಿಂದ ಶೌಚಗೃಹಗಳು ಉಪಯೋಗಕ್ಕೆ ಬಾರದಂತಾಗಿವೆ. ಇನ್ನು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ದುರಸ್ತಿಪಡಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿಸಿದೆ.

    ಮಕ್ಕಳಿಂದ ದೂರ
    ಮಕ್ಕಳು ಇಷ್ಟವಾದ ಆಟವಾಡಿಕೊಂಡು, ಮರ&ಗಿಡ, ನವಿಲು, ಅಳಿಲು, ಜಿಂಕೆ ಸೇರಿ ನಾನಾ ಪ್ರಾಣಿ ಪಕ್ಷಿಗಳ ಪ್ರಕೃತಿ ಕಾಣಬಹುದಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಉದ್ಯಾನ ಮಕ್ಕಳಿಂದ ದೂರವಾಗಿದೆ. ವಾಯುವಿಹಾರಕ್ಕೆ ಅನುಕೂಲ ಆಗಲಿದೆ ಎನ್ನುವ ಕಾರಣಕ್ಕೆ ಸಾಲು ಮರದ ತಿಮ್ಮಕ್ಕ ವೃೋದ್ಯಾನ ಆಯ್ಕೆ ಮಾಡಲಾಗಿದ್ದು, ಇನ್ನಾದರೂ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

    ಹೆಸರು ಸರಿಪಡಿಸಲು ಒತ್ತಾಯ
    ವೃೋದ್ಯಾನದ ಪ್ರವೇಶ ದ್ವಾರದಲ್ಲಿ ಸಾಲುಮರದ ತಿಮ್ಮಕ್ಕ ವೃೋದ್ಯಾನ ಎಂದು ನಾಮಲಕ ಅಳವಡಿಸಲಾಗಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ “ತಿಮ್ಮಕ್ಕ’ ಬದಲು “ಮಕ್ಕ’ ಎಂದಾಗಿದ್ದು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಅವಮಾನ ಮಾಡಿದಂತಾಗಿದೆ. ಕೂಡಲೇ ಹೆಸರು ಸರಿಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

    ಕೋಟ್​…
    ಕೋಟ್ಯಂತರ ರೂ. ವೆಚ್ಚ ಮಾಡಿ ಉದ್ಯಾನವನ ನಿಮಾರ್ಣ ಮಾಡಿದ್ದು, ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ನೀಡಿಲ್ಲ. ಯಾವಾಗ ನೋಡಿದರೂ ಗೇಟ್​ಗೆ ಬೀಗ ಹಾಕಿರುತ್ತಾರೆ. ಕೂಡಲೇ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು.-ಪ್ರಜ್ವಲ್​

    ವೃಕ್ಷೋದ್ಯಾನಕ್ಕೆ ನಿತ್ಯವೂ ಬೀಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts