ಶ್ರೀ ಅಷ್ಟಭುಜ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ

15BK2
Published on

ಬಸವಕಲ್ಯಾಣ: ನಗರದ ಸಮೀಪದ ಖಾನಾಪುರ ಬಳಿಯ ಶ್ರೀ ಅಷ್ಟಭುಜ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ ದೇವಿಯ ಅಭಿಷೇಕ, ಘಟಸ್ಥಾಪನೆ, ವಿಶೇಷ ಪೂಜೆ ನೆರವೇರಿಸಿ, ಒಂಬತ್ತು ದಿನಗಳ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಶ್ರೀ ಅಷ್ಟಭುಜ ದುರ್ಗಾದೇವಿ ದೇವಸ್ಥಾನದಲ್ಲಿ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಸ್ವಾಮಿ ಅವರಿಂದ ನವರಾತ್ರಿ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದರು.

ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ, ಆರತಿ, ಹವನ ನೆರವೇರಲಿದೆ. ಸೋಮವಾರ ದೇವಿ ಪೂಜೆ ಹಾಗೂ ಭಜನೆ, ಮಂಗಳವಾರ ಹಾಗೂ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಮತ್ತು ಅರಿಶಿನ ಕುಂಕುಮ ಕಾರ್ಯಕ್ರಮ ಜರುಗಲಿದೆ.

ಬುಧವಾರ ಅಲಂಕಾರ ಮಹಾಪೂಜೆ, ಗುರುವಾರ ಲಲಿತ ಪಂಚಮಿ, ಶನಿವಾರ ಮಹಾಲಕ್ಷಿ ಪೂಜೆ, ಭಾನುವಾರ ದುರ್ಗಾಷ್ಟಮಿ ಮತ್ತು ಮಹಾ ಪೂಜೆ, ೨೩ರಂದು ಮಹಾನವಮಿ, ಉಪವಾಸ ಮತ್ತು ಪರಡಿ ತುಂಬುವ ಕಾರ್ಯಕ್ರಮ, ೨೪ರಂದು ವಿಜಯದಶಮಿ(ದಸರಾ) ಸೀಮೋಲ್ಲಂಘನ ಕಾರ್ಯಕ್ರಮ ಜರುಗಿತು.

೧೭ರಂದು ಕುಂಕುಮಾರ್ಚನೆ: ನವರಾತ್ರಿ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಬೆಳಗ್ಗೆ ೯ಕ್ಕೆ ಜರುಗಲಿರುವ ವಿಶೇಷ ಪ್ರಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆಯಬೇಕು ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಸ್ವಾಮಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net