

ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 85 ಸಾವಿರದ ಗಡಿ ದಾಟಿದೆ. ಮೂರನೇ ಅವಧಿಯ ಲಾಕ್ಡೌನ್ ಮುಕ್ತಾಯದ ಹಂತದಲ್ಲಿದೆ. ಈ ಮಧ್ಯೆ ಎಲ್ಲ ರಾಜ್ಯಗಳಲ್ಲೂ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಲೇ ಇರುವುದು ಆತಂಕ ಮೂಡಿಸುತ್ತಿದೆ.
ಹೈದರಾಬಾದ್ನ ಮದನ್ನಪೇಟೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಒಟ್ಟು 25 ಮಂದಿಯಲ್ಲಿ ಇಂದು ಕರೊನಾ ದೃಢಪಟ್ಟಿದ್ದು, ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಈ 25 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಅಪಾರ್ಟ್ಮೆಂಟ್ನ ಒಟ್ಟು 50 ನಿವಾಸಿಗಳಿಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ನಿಂದ ಕೊವಿಡ್-19 ಟೆಸ್ಟ್ ಮಾಡಲಾಗಿತ್ತು. ಅವರಲ್ಲಿ ಈಗ 11 ತಿಂಗಳ ಮಗು, ಓರ್ವ ಗರ್ಭಿಣಿ ಸೇರಿ 25 ಮಂದಿಗೆ ಪಾಸಿಟಿವ್ ಬಂದಿದೆ.
ಇದೀಗ ಮದನ್ಪೇಟೆ ಸುತ್ತಮುತ್ತ ಎಲ್ಲರನ್ನೂ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.(ಏಜೆನ್ಸೀಸ್)
ಇದನ್ನೂ ಓದಿ: ದೂರದಿಂದಲೇ ಮಕ್ಕಳತ್ತ ಕೈ ಬೀಸಿ ಕಣ್ಣೀರಾದ ಪಾಲಕರು…