ರಾಜ್ಯದಲ್ಲಿ ಸಕ್ರಿಯ ಕರೊನಾ ಕೇಸ್​ಗಳು 559, ಮರಣ ಸಂಖ್ಯೆ 36; 13 ಮಂದಿ ಐಸಿಯುವಿನಲ್ಲಿ

covid new
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ ಒಟ್ಟು 36 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1092ಕ್ಕೆ ಏರಿದೆ.

ಅದರಲ್ಲಿ ಕೊವಿಡ್​-19 ಸಕ್ರಿಯ ಪ್ರಕರಣಗಳು 559 ಆಗಿದ್ದು, ಅದರಲ್ಲಿ 13 ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 496 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ.

ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನ 12ಗಂಟೆವರೆಗೆ ಒಟ್ಟು 23 ಹೊಸ ಕೇಸ್​ಗಳು ಪತ್ತೆಯಾಗಿದ್ದವು. ಆ ಸಂಖ್ಯೆ ಸಂಜೆ 5ಗಂಟೆ ಹೊತ್ತಿಗೆ 36ಕ್ಕೆ ಏರಿದೆ.

24 ಗಂಟೆಯಲ್ಲಿ ಕಾಣಿಸಿಕೊಂಡ ಕರೊನಾ ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ 14 ಕೇಸ್​ಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಇನ್ನು ಶಿವಮೊಗ್ಗದಲ್ಲಿ 3, ಕಲಬುರಗಿ 8, ಹಾಸನ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯ, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ, ವಿಜಯಪುರ, ಧಾರವಾಡ, ಉಡುಪಿಗಳಲ್ಲಿ ತಲಾ ಒಂದು ಕೇಸ್​ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net