

ಬೆಂಗಳೂರು: ಕರೊನಾ COVID19 ವೈರಸ್ ಸೋಂಕು ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಹೊಸದಾಗಿ 23 ಜನರಲ್ಲಿ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕುಪೀಡಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕು ಸಕ್ರಿಯವಾಗಿರುವವರ ಸಂಖ್ಯೆ 548 ಆದರೆ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 494.
ಇನ್ನು ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 36 ಆಗಿದ್ದು, ಇದಲ್ಲದೆ ಒಬ್ಬ ಸೋಂಕುಪೀಡಿತ ವ್ಯಕ್ತಿ ಕೋವಿಡ್ 19 ಅಲ್ಲದ ಕಾರಣದಿಂದಾಗಿ ಮೃತಪಟ್ಟಿರುತ್ತಾರೆ. ರಾಜ್ಯದಲ್ಲಿ ಇಂದು ಖಚಿತವಾಗಿರುವ ಹೊಸ 23 ಪ್ರಕರಣಗಳ ಪೈಕಿ ಗರಿಷ್ಠ 15 ಪ್ರಕರಣ ಬೆಂಗಳೂರಿನಲ್ಲೇ ಇದೆ. ಉಳಿದಂತೆ ಹಾಸನದಲ್ಲಿ ಮೂರು, ಹುಬ್ಬಳ್ಳಿ, ಉಡುಪಿ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಈ ಪೈಕಿ 9 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಅಂತಾರಾಜ್ಯ, ಅಂತರ್ಜಿಲ್ಲೆ, ಅಂತಾರಾಷ್ಟ್ರೀಯ ಪ್ರಯಾಣದ ವಿವರ ನೀಡಿದ್ದಾರೆ. ಇನ್ನುಳಿದಂತೆ ವಿವರಗಳಿಗೆ ಕೆಳಗೆ ಇರುವ ಬುಲೆಟಿನ್ ಪ್ರತಿಯನ್ನು ವೀಕ್ಷಿಸಬಹುದು.