More

    ಸೆಕೆಂಡ್​ ಪಿಯು ವಿದ್ಯಾರ್ಥಿಗಳ ಗಮನಕ್ಕೆ- ಇಂಗ್ಲಿಷ್ ಪರೀಕ್ಷೆ ನೀವಿರುವ ಜಿಲ್ಲೆಯಿಂದಲೇ ಬರೀತೀರಾ? – ಈ ಸುದ್ದಿ ಓದಿ..

    ಬೆಂಗಳೂರು: ಕರೊನಾ COVID19 ವೈರಸ್ ಸೋಂಕು ತಡೆಯುವುದಕ್ಕಾಗಿ ಮಾರ್ಚ್ 24ರಂದು ಲಾಕ್​ಡೌನ್ ಘೋಷಿಸಿದ ವೇಳೆ ಸೆಕೆಂಡ್ ಪಿಯು ಪರೀಕ್ಷೆ ಅಂತಿಮ ಘಟ್ಟದಲ್ಲಿತ್ತು. ಇಂಗ್ಲಿಷ್ ಪರೀಕ್ಷೆ ಒಂದೇ ಬಾಕಿ ಇತ್ತು. ಆದರೆ ಅದನ್ನು ನಡೆಸುವುದು ಸಾಧ್ಯವಾಗದೇ ಹೋಗಿತ್ತು. ಈಗ ಅದರ ಸಿದ್ಧತೆ ಆರಂಭವಾಗಿದ್ದು, ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸುವುದಾಗಿ ಸಚಿವರು ಹನ್ನೊಂದು ದಿನಗಳ ಕೆಳಗೆ ಹೇಳಿದ್ದರು.

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಇದೀಗ ಪದವಿಪೂರ್ವ ಶಿಕ್ಷಣ ಇಲಾಖೆ ನಿನ್ನೆ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ಪ್ರಕಟಿಸಿದೆ. ಇದರಂತೆ, ಸೆಕೆಂಡ್ ಪಿಯು ವಿದ್ಯಾರ್ಥಿಗಳು ತಾವು ಯಾವ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೋ ಅವರು ಇಚ್ಛಿಸಿದರೆ, ಅದೇ ಜಿಲ್ಲೆಯಿಂದಲೇ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ತೀರ್ಮಾನಿಸಿದೆ. ಹೀಗಾಗಿ, ಕೆಲವು ಮಾಹಿತಿಗಳನ್ನು [email protected] ಅಥವಾ ಇಲಾಖೆ ಕಚೇರಿಗೆ ಖುದ್ದಾಗಿ ತಲುಪಿಸಬೇಕು. ವಾಟ್ಸ್ಆ್ಯಪ್ ಮೂಲಕ ತಲುಪಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಪಿಯು ಪರೀಕ್ಷೆ ಬರೆದವರಿಗೆಲ್ಲ ಸಿಎ ಫೌಂಡೇಷನ್​ ಕೋರ್ಸ್​ ನೋಂದಣಿಗೆ ಅವಕಾಶ

    ವಿದ್ಯಾರ್ಥಿಗಳು ಕಳುಹಿಸಬೇಕಾದ ಮಾಹಿತಿಗಳಿವು- ಕಾಲೇಜಿನ ಸಂಕೇತ ಸಂಖ್ಯೆ, ವಿದ್ಯಾರ್ಥಿಯ ಹೆಸರು, ಸ್ಟೂಡೆಂಟ್ ನಂಬರ್, ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್, ವಿದ್ಯಾರ್ಥಿಯ ಮೊಬೈಲ್ ನಂಬರ್, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತ, ಈಗಾಗಲೇ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರ ಹೊರತುಪಡಿಸಿ, ಪ್ರಸ್ತುತ ವಾಸವಿರುವ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛೆ ಇದ್ದರೆ ಅದರ ವಿವರ ನೀಡಬೇಕು.

    ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂನ್ ನಲ್ಲಿ: ಸುರೇಶ್ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts