More

    ಒಂದು ವರ್ಷದಲ್ಲಿ 380% ಏರಿಕೆಯಾಗಿ ಹೂಡಿಕೆದಾರರಿಗೆ ಲಾಭ ನೀಡಿದ ಸ್ಟಾಕ್​: ಈಗ 1 ಷೇರಿಗೆ 3 ಉಚಿತ ಷೇರುಗಳ ಲಾಟರಿ

    ಮುಂಬೈ: ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ಯೋಗ್ಯ ಲಾಭವನ್ನು ಅನೇಕ ಕಂಪನಿಗಳು ನೀಡಿವೆ. ಇವುಗಳಲ್ಲಿ ಐನಾಕ್ಸ್​ ವಿಂಡ್​ (INOX Wind) ಕೂಡ ಒಂದು. ಈ ಅವಧಿಯಲ್ಲಿ, ಕಂಪನಿಯು ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ. ಈಗ ಕಂಪನಿಯು ಬೋನಸ್ ಷೇರುಗಳ ವಿತರಣೆಯನ್ನು ಪ್ರಕಟಿಸಿದೆ. ಕಂಪನಿಯು ಈ ಮೊದಲು ಘೋಷಿಸಿದ್ದ ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು ಬದಲಾಯಿಸಿದೆ.

    ಕಂಪನಿಯು ಒಂದು ಷೇರಿಗೆ 3 ಬೋನಸ್ ಷೇರುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು ದಾಖಲೆಯ ದಿನಾಂಕವನ್ನು ಮೇ 17ಕ್ಕೆ ನಿಗದಿಪಡಿಸಿತ್ತು. ಆದರೆ, ಈಗ ಕಂಪನಿಯ ಕಡೆಯಿಂದ ದಾಖಲೆ ದಿನಾಂಕವನ್ನು ಬದಲಾಯಿಸಲಾಗಿದೆ. ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 25ನೇ ಮೇ 2024 ರಂದು ಅಂದರೆ ಶನಿವಾರ ನಿಗದಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಂದರೆ, ಈ ದಿನ ಕಂಪನಿಯು ತನ್ನ ದಾಖಲೆಯನ್ನು ಸ್ಕ್ರಾಚ್ ಮಾಡುತ್ತದೆ. ಕಂಪನಿಯ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಬೋನಸ್ ಷೇರುಗಳ ಲಾಭವನ್ನು ಸಹ ಪಡೆಯುತ್ತಾರೆ.

    ಶುಕ್ರವಾರ ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 2.02 ರಷ್ಟು ಕುಸಿದು 543.45 ರೂ. ಮುಟ್ಟಿತು. ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್‌ನ ಬೆಲೆಯಲ್ಲಿ ಶೇಕಡಾ 380 ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ. 6 ತಿಂಗಳಲ್ಲಿ ಈ ಷೇರು ಬೆಲೆ 128 ಪ್ರತಿಶತದಷ್ಟು ಹೆಚ್ಚಳವಾಗಿದೆ.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ. 663 ಮತ್ತು ಕನಿಷ್ಠ ಬೆಲೆ ರೂ. 111.10 ಇದೆ. ಕಂಪನಿಯ ಮಾರುಕಟ್ಟೆ ಮೌಲ್ಯ 17,713.67 ಕೋಟಿ ರೂ. ಇದೆ. ಕಂಪನಿಯು ಇದೇ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ನೀಡುತ್ತಿದೆ.

    ಈ ಕಂಪನಿಯ ಪ್ರಮುಖ ಉತ್ಪನ್ನವೆಂದರೆ 2 MW DFIG (ಡಬಲ್ ಫೆಡ್ ಇಂಡಕ್ಷನ್ ಜನರೇಟರ್). ಕಂಪನಿಯು ಪ್ರಸ್ತುತ 2 MW WTG ಯ ಮೂರು ರೂಪಾಂತರಗಳನ್ನು ತಯಾರಿಸುತ್ತದೆ. 93.3 ಮೀಟರ್ ರೋಟರ್ ವ್ಯಾಸ, 100 ಮೀಟರ್ ರೋಟರ್ ವ್ಯಾಸ ಮತ್ತು 113 ಮೀಟರ್ ರೋಟರ್ ವ್ಯಾಸ ಇವುಗಳದ್ದಾಗಿದೆ.

    ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದು ಅಮಿತ್ ಶಾ; ಕೇಜ್ರಿವಾಲ್​ ಸತ್ಯವನ್ನೇ ಹೇಳಿದ್ದಾರೆಂದ ಬಿಜೆಪಿ ವಕ್ತಾರ

    ಬಾಲಿವುಡ್​ ನಟ ಮನೋಜ್ ಬಾಜಪೇಯಿ ಅವರು ವಯಸ್ಕರ ಚಿತ್ರಗಳ ಅಡಲ್ಟ್​ ಸ್ಟಾರ್​ ಆಗಿದ್ದು ನಿಜವೇ?

    ಮೋದಿ ನಿವೃತ್ತಿ, ಅಮಿತ್​ ಶಾ ಪ್ರಧಾನಿ: ಯೋಗಿ ಆದಿತ್ಯನಾಥ್‌ಗೆ ಅರವಿಂದ್ ಕೇಜ್ರಿವಾಲ್ ನೀಡಿದ ಎಚ್ಚರಿಕೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts