

ನವದೆಹಲಿ: ವಿಧಾನಸಭೆ ಕಲಾಪಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಈವರೆಗೆ ಸಚಿವರು, ಶಾಸಕರು ಸೇರಿ 23 ಜನರಿಗೆ ಕೋವಿಡ್ ಸೋಂಕು ತಗುಲಿದೆ....!
ಇದು ಪಂಜಾಬ್ ಶಾಸನಸಭೆಯ ಸ್ಥಿತಿ. ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಬಿಚ್ಚಿಟ್ಟ ವಾಸ್ತವ ಸ್ಥಿತಿ. ಶಾಸಕರ ಸ್ಥಿತಿಯೇ ಹೀಗಿರುವಾಗ ಇನ್ನೂ ಯಾವ ರೀತಿ ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗೆ ಸಜ್ಜಾಗಿ ಎಂದು ವಿದ್ಯಾರ್ಥಿಗಳಿಗೆ ಹೇಳಲಿ ಎನ್ನುವುದು ಅಮರೀಂದರ್ ಅಳಲು.
ಪಂಜಾಬ್ ವಿಧಾನಸಭೆ ಕಲಾಪ ಆಗಸ್ಟ್ 28ಕ್ಕೆ ಆರಂಭವಾಗಲಿದೆ. ಈವರೆಗೆ ಒಟ್ಟಾರೆ 23 ಜನಪ್ರತಿನಿಧಿಗಳು ಕರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ನೀಟ್ ಹಾಗೂ ಜೆಇಇ ಪರೀಕ್ಷೆಗಳ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಲು ಇತರ ಸಮಾನ ಮನಸ್ಕ ರಾಜ್ಯಗಳ ಅಡ್ವೋಕೇಟ್ ಜನರಲ್ಗಳೊಂದಿಗೆ ಚರ್ಚೆ ನಡೆಸಲು ಸಿಎಂ ಸೂಚಿಸಿದ್ದಾರೆ.
ಇನ್ನೊಂದೆಡೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡುವಂತೆ ಅಥವಾ ಕೈಬಿಡುವಂತೆ ಮನವಿ ಮಾಡಿದರೂ ಯುಜಿಸಿ ಕೇಳುತ್ತಿಲ್ಲ ಅಮರೀಂದರ್ ಸಿಂಗ್ ಹೇಳಿದ್ದಾರೆ.