ಬಿಜೆಪಿಯಿಂದ ಟಿಎಂಸಿಗೆ ಮರಳಿದ 200 ಕಾರ್ಯಕರ್ತರು; ತಲೆ ಬೋಳಿಸಿ, ಗಂಗಾಜಲ ಸಿಂಪಡಿಸಿಕೊಂಡು ಶುದ್ಧಿ

bjp tmc
Published on

ಕೋಲ್ಕತ: ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲು ಟಿಎಂಸಿಯ ಅನೇಕ ನಾಯಕರು ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದನ್ನು ನೋಡಿದ್ದೇವೆ. ಇದೀಗ ಬಿಜೆಪಿಯ ನೂರಾರು ಕಾರ್ಯಕರ್ತರು ಪಕ್ಷ ತ್ಯಜಿಸಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸೇರಲಾರಂಭಿಸಿದ್ದಾರೆ. ಅದೇ ನಡೆಯಲ್ಲಿ ಮಂಗಳವಾರದಂದು ಹೂಗ್ಲಿ ಜಿಲ್ಲೆಯ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ತ್ಯಜಿಸಿದ ಕಾರ್ಯಕರ್ತರು ತಲೆಯನ್ನು ಬೋಳಿಸಿಕೊಂಡು, ಗಂಗಾ ಜಲವನ್ನು ಸಿಂಪಡಿಸಿಕೊಂಡು ಟಿಎಂಸಿ ಸೇರಿದ್ದಾರೆ. ತಾವು ಬಿಜೆಪಿ ಸೇರಿದ್ದು ಜೀವನದ ಅತ್ಯಂತ ದೊಡ್ಡ ತಪ್ಪಾಗಿದ್ದು, ಅದನ್ನು ಸರಿಪಡಿಸಿಕೊಳ್ಳಲು ಈ ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅರಂಬಾಘ್ ಕ್ಷೇತ್ರದ ಟಿಎಂಸಿ ಸಂಸದ ಅಪರೂಪ್​ ಪೊದ್ದಾರ್​ ಅವರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಮಂಗಳವಾರದಂದು ಅಪರೂಪ್​ ಅವರು ತಮ್ಮ ಕ್ಷೇತ್ರದಲ್ಲಿ ಉಚಿತವಾಗಿ ಊಟ ಹಂಚಿದ್ದರು. ಈ ವೇಳೆ ಬಿಜೆಪಿಯ ಅನೇಕ ದಲಿತ ಕಾರ್ಯಕರ್ತರು ತಮ್ಮ ಬಳಿ ಬಂದು ತಾವು ದೊಡ್ಡ ತಪ್ಪು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಂತರ ಅವರೆಲ್ಲರೂ ಟಿಎಂಸಿ ಸೇರ್ಪಡೆಗೊಂಡಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net