ಪಹಲ್ಗಾಮ್ ದಾಳಿಗೆ ಪ್ರತೀಕಾರ: ಜಮ್ಮು-ಕಾಶ್ಮೀರದ 20 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ ಗೌರವ| J & K Police

ವಿಜಯವಾಣಿ - 2025-10-31T133726.572
Published on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಪ್ರತೀಕಾರಕ್ಕಾಗಿ ಸೇವೆ ಸಲ್ಲಿಸಿದ ಜಮ್ಮು ಮತ್ತು ಕಾಶ್ಮೀರದ(J & K Police) ಐಜಿ, ಡಿಐಜಿ ಸೇರಿ ಒಟ್ಟು 20 ಅಧಿಕಾರಿಗಳಿಗೆ ಇಂದು(ಅ. 31) ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ ನೀಡಿ ಗೌರವಿಸಲಾಗಿದೆ ಎಂದು ಪಿಐಬಿ ವರದಿ ಮಾಡಿದೆ.

2025ರ 'ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ'ಕ್ಕೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ  ಕೇಂದ್ರ ಸಂಸ್ಥೆಗಳಿಂದ 1,466 ಪೊಲೀಸ್ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಐಜಿ ಕಾಶ್ಮೀರ ವಿಧಿ ಕುಮಾರ್ ಬರ್ಡಿ, ಡಿಐಜಿ ಸೆಂಟ್ರಲ್ ಕಾಶ್ಮೀರ ಪಾಂಡೆ ರಾಜೀವ್ ಓಂಪ್ರಕಾಶ್ ಮತ್ತು ಎಸ್‌ಎಸ್‌ಪಿ ಶ್ರೀನಗರ ಸಂದೀಪ್ ಚಕ್ರವರ್ತಿ ಸೇರಿದಂತೆ 20 ಅಧಿಕಾರಿಗಳಿಗೆ ನೀಡಲಾಗಿದೆ.

ಈ ಪದಕವನ್ನು 2024 ಫೆಬ್ರವರಿ 1ರಂದು ಸ್ಥಾಪಿಸಲಾಗಿದ್ದು, ಇದನ್ನು ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಹಾಗೂ ವಿಧಿವಿಜ್ಞಾನ ಈ ನಾಲ್ಕು ಕ್ಷೇತ್ರಗಳಲ್ಲಿನ ಕೆಲಸವನ್ನು ಗುರುತಿಸಲು ಮತ್ತು ಅಧಿಕಾರಿಗಳ ನೈತಿಕತೆಯನ್ನು ಹೆಚ್ಚಿಸಲು ಪದಕಗಳನ್ನು ನೀಡಲಾಗುತ್ತದೆ. ಪ್ರತಿ ವರ್ಷ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಪದಕವನ್ನು ಘೋಷಿಸಲಾಗುತ್ತದೆ ಎಂದು ಕೇಂದ್ರ ಗೃಹಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು 1,466 ಪೊಲೀಸ್ ಸಿಬ್ಬಂದಿಗಳಲ್ಲಿ 1,364 ಪೊಲೀಸರನ್ನು ಅವರ ವಿಶೇಷ ಕಾರ್ಯಾಚರಣೆಗಳ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ, 93 ಮಂದಿಯನ್ನು ತನಿಖಾ ಕ್ಷೇತ್ರದಲ್ಲಿ ಹಾಗೂ ಒಂಬತ್ತು ಅಧಿಕಾರಿಗಳನ್ನು ವಿಧಿವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net