18 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ!; ಐವರ ಬಂಧನ

Untitled design (16)
Published on

ಐಜ್ವಾಲ್, ಮಿಜೋರಾಂ: ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 18 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆರಾಯಿನ್ ಮತ್ತು 1.21 ಕೋಟಿ ರೂ. ನಗದು ವಶಪಡಿಸಿಕೊಂಡ ಬೆನ್ನಲ್ಲೇ ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ಐವರು ಮೈನಾಮರ್​ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಶನಿವಾರ (ನ.11) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಳಿವಿನ ಮೇರೆಗೆ ಅಸ್ಸಾಂ ರೈಫಲ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ತಂಡಗಳು ಮಿಜೋರಾಂ-ಮೈನಾಮರ್​ ಗಡಿಯಲ್ಲಿರುವ ಝೋಟ್ ಮತ್ತು ಝೋಖವ್ತಾರ್ ಗ್ರಾಮಗಳಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ್ದು, 2.61 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ ಎಂದು ಹೇಳಿದರು.

ಅಸ್ಸಾಂ ರೈಫಲ್ಸ್ ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡ ಹೆರಾಯಿನ್‌ನ ಮಾರುಕಟ್ಟೆ ಮೌಲ್ಯ 18.30 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಲೆಕ್ಕಕ್ಕೆ ಸಿಗದ ನಗದು ಭಾರತೀಯ ಕರೆನ್ಸಿ ನೋಟುಗಳಲ್ಲಿದೆ. 500, 200, 100 ಮತ್ತು 50 ರೂ. ಮುಖಬೆಲೆಯ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಂಟಿ ಕಾರ್ಯಾಚರಣೆಯಲ್ಲಿ ಐವರು ಮೈನಾಮರ್​ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ಅಕ್ರಮ ವಸ್ತುಗಳನ್ನು ಕಾನೂನು ಕ್ರಮಗಳಿಗಾಗಿ ಚಂಫೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net