More

    ಠುಸ್ಸಾದ ಬಾಬರ್​ ಅಜಾಮ್​ ಪ್ಲ್ಯಾನ್​: ವಿಶ್ವಕಪ್​ನಿಂದ ಪಾಕ್​ ಔಟ್​, ಸೆಮೀಸ್​ನಲ್ಲಿ ಭಾರತಕ್ಕೆ ಕಿವೀಸ್​ ಸವಾಲು

    ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ 44ನೇ ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಪಾಕಿಸ್ತಾನ ತಂಡ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದು, ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್​ ತಂಡ ಕಾದಾಡುವುದು ಖಚಿತವಾಗಿದೆ.

    ಲಂಕಾ ವಿರುದ್ಧ ನ್ಯೂಜಿಲೆಂಡ್​ ಗೆದ್ದರೂ ಸೆಮೀಸ್​ ಹಂತಕ್ಕೇರಲು ಪಾಕ್​ಗೆ ಬಹುದೊಡ್ಡ ಸವಾಲು ಮುಂದಿತ್ತು. ಅದು ಅಂತಿಂಥ ಸವಾಲಲ್ಲ. ಪವಾಡವೇ ನಡೆಯಬೇಕಿತ್ತು. ಆದರೆ, ಆ ಪವಾಡ ಇಂದು ಈಡನ್​ ಗಾರ್ಡನ್​ ಮೈದಾನದಲ್ಲಿ ಪಾಕ್​ ಪಾಲಿಗೆ ನಡೆಯಲೇ ಇಲ್ಲ.

    ಇಂದು ಟಾಸ್​ ಗೆದ್ದ ಇಂಗ್ಲೆಂಡ್​ ಆರಂಭದಲ್ಲೇ ಜಯ ಸಾಧಿಸಿತು. ಬಳಿಕ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ ಪಡೆ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 337 ರನ್​ಗಳ ಬೃಹತ್​ ಮೊತ್ತವನ್ನು ಪೇರಿಸಿದೆ. ನ್ಯೂಜಿಲೆಂಡ್​ ತಂಡದ ರನ್​ರೇಟ್​ ಹಿಂದಿಕ್ಕಿ ಸಮಿಫೈನಲ್​ಗೇರಲು ಆಂಗ್ಲ ಪಡೆ ನೀಡಿದ ಗುರಿಯನ್ನು ಕೇವಲ 6.4 ಓವರ್​ಗಳಲ್ಲಿ ಪಾಕಿಸ್ತಾನ ಮುಟ್ಟಬೇಕಿತ್ತು. ಆದರೆ, ಅದು ಬಾಬರ್​ ಅಜಾಮ್​ ಪಡೆಯಿಂದ ಸಾಧ್ಯವಾಗಲಿಲ್ಲ. ಸದ್ಯ ಬ್ಯಾಟಿಂಗ್​ ಮಾಡುತ್ತಿರುವ ಪಾಕಿಸ್ತಾನ 12.2 ಓವರ್​ಗಳಲ್ಲಿ 60 ರನ್​ಗೆ 2 ವಿಕೆಟ್​ ಕಳೆದುಕೊಳ್ಳುವ ಮೂಲಕ ಪಂದ್ಯದ ಫಲಿತಾಂಶಕ್ಕೂ ಮುನ್ನವೇ ವಿಶ್ವಕಪ್​ ಟೂರ್ನಿಯಿಂದಲೇ ಹೊರಬಿದ್ದಿದೆ.

    ಎಲ್ಲ ಎಸೆತಗಳಲ್ಲೂ ಸಿಕ್ಸರ್​ ಬಾರಿಸಿದ್ರೂ ಸಿಗಲ್ಲ ಗೆಲುವು
    ಪಾಕಿಸ್ತಾನ ತಂಡ ಸೆಮೀಸ್​ಗೇರಲು 6.4 ಓವರ್​ಗಳಲ್ಲಿ 337 ರನ್​ ಗಳಿಸಬೇಕಿತ್ತು. ಇದಕ್ಕಾಗಿ ಅವರು ಪ್ರತಿ ಎಸೆತಗಳನ್ನೂ ಸಿಕ್ಸರ್​ ಬಾರಿಸಿದ್ರೂ ಸಮೀಸ್​ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ. ತಮ್ಮದೇ ದೇಶದ ಮಾಜಿ ಆಟಗಾರರಿಂದ ತೀವ್ರ ಗೇಲಿಗೆ ಒಳಗಾಗಿರುವ ಪಾಕ್​ ಇದೀಗ ಭಾರೀ ಮುಖದೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮುಗಿಸುತ್ತಿದೆ.

    ಠುಸ್ಸಾಯ್ತು ಬಾಬರ್​ ಅಜಾಮ್​ ತಂತ್ರ
    ಶುಕ್ರವಾರ (ನ.10) ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್​ ಅಜಾಮ್​, ಒಂದು ವೇಳೆ ಫಖರ್​ ಜಮಾನ್​ ಅವರು 20 ರಿಂದ 30 ಓವರ್​ ಕ್ರೀಸ್​ನಲ್ಲಿದ್ದರೆ ನಾವು ದೊಡ್ಡ ಸ್ಕೋರ್​ ಮಾಡುತ್ತೇವೆ ಎಂದಿದ್ದರು. ಕ್ರಿಕೆಟ್‌ನಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು, ನಾವು ಪಂದ್ಯಾವಳಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಪ್ರಯತ್ನಿಸುತ್ತೇವೆ. ಇಫ್ತಿಕರ್ ಅಹ್ಮದ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಪಾತ್ರವೂ ತುಂಬಾ ಪ್ರಮುಖವಾಗಿರುತ್ತದೆ ಎಂದು ಅಜಮ್ ಆತ್ಮವಿಶ್ವಾಸದಿಂದ ಹೇಳಿದ್ದರು.

    ಸಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

    ಭಾರತ ಯಾವಾಗಲೂ ಪ್ಯಾಲೆಸ್ತೇನ್ ಜೊತೆಗಿತ್ತು; ಪಿಣರಾಯಿ ವಿಜಯನ್ ನೆಹರು ನೀತಿ ಹೊಗಳಿ ಕಾಂಗ್ರೆಸ್​ ನಡೆ ಟೀಕಿಸಿದ ಕೇರಳ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts