BBKS10: ನನ್ನ ಬಗ್ಗೆ ಹೀಯಾಳಿಸಿದವರು, ಈಗ ನೆನಪಿಸಿಕೊಂಡರೆ ಮನಸ್ಸು ಬಹಳ ಹಗುರವಾಗಿದೆ; ಪ್ರತಾಪ್​ ಭಾವುಕ

Untitled design (15)
Published on

ಬೆಂಗಳೂರು: ಕನ್ನಡದ ಬಿಗ್​ ಬಾಸ್​ ಸೀಸನ್​ 10 ಇದೀಗ ಐದನೇ ವಾರದ ಅಂತ್ಯವನ್ನು ತಲುಪಿದ್ದು, ಶನಿವಾರದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಪ್ರತಾಪ್ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡರು. ಈ ವೇಳೆ ಪ್ರತಾಪ್​ ಭಾವುಕರಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ವಾರ ಪೂರ ತಮ್ಮ ತಂಡದ ನಾಯಕನಾಗಿ ಪ್ರತಾಪ್​ ತೆಗೆದುಕೊಂಡ ನಿರ್ಣಯ, ಆಡಿದ ಮಾತುಗಳು, ಪ್ರಮಾಣಿಕತೆ ಎಲ್ಲವನ್ನೂ ಪರಿಗಣಿಸಿ ಕಿಚ್ಚ ಸುದೀಪ್​ ತಮ್ಮ ಚಪ್ಪಾಳೆಯನ್ನು ಪ್ರತಾಪ್​ಗೆ ನೀಡಿದರು. ಸುದೀಪ್​ ಅವರಿಂದ ದೊರೆತ ಚಪ್ಪಾಳೆಗೆ ಭಾರೀ ಸಂತಸ ಹೊರಹಾಕಿದ ಪ್ರತಾಪ್​, ಕೈಮುಗಿದು ಧನ್ಯವಾದ ತಿಳಿಸಿದರು.

“ಇದು ಬಿಗ್​ ಮೊಮೆಂಟ್​ ಸರ್, ಹೊರಗಡೆಯಾದ್ರೆ ಎರಡು ಕಡೆಯಲ್ಲಿ ಏನು ತಪ್ಪಾಗುತ್ತೆ ಎಂಬುದು ಕಾಣಿಸೋದಿಲ್ಲ. ಹೌದು, ನಾನು ಕೆಲವು ತಪ್ಪು ಮಾಡಿದ್ದೇನೆ. ಅದನ್ನು ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜುಗರವಿಲ್ಲ. ನನ್ನ ಕಳ್ಳ-ಸುಳ್ಳ ಅಂದ್ರು, ಹೀಯಾಳಿಸಿದರು. ಈಗ ನೆನಪಿಸಿಕೊಂಡರೆ ಮನಸ್ಸು ಬಹಳ ಹಗುರ ಅನಿಸುತ್ತದೆ ಸರ್”​ ಎಂದು ಭಾವುಕರಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net